ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಸ್ತ, ಕನ್ನಡಿಗರಿಗೆ, ದೇಶದ ನಿವಾಸಿ ಮತ್ತು ಮಾಧ್ಯಮದವರಿಗೆ ಹೊಸವರ್ಷದ ಶುಭಾಷಯಗಳನ್ನು ತಿಳಿಸಿದರು. ಮುಂದುವರಿದು ಮಾತಾಡಿದ ಸಿಎಂ, ಸಚಿನ್ ಪಾಂಚಾಳ್ ಸಾವಿನ ಪ್ರಕರರಣದಲ್ಲಿ ಪ್ರಿಯಾಂಕ್ ಖರ್ಗೆಯ ಪಾತ್ರವಿಲ್ಲ, ಡೆತ್ ನೋಟಲ್ಲಿ ಅವರ ಹೆಸರಿನ ಉಲ್ಲೇಖವಿಲ್ಲ, ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗಿಲ್ಲ ಮತ್ತು ಅದಕ್ಕೂ ಮಿಗಿಲಾಗಿ ಅವರು ಯಾವುದೇ ತನಿಖೆಗೆ ತಯಾರಾಗಿರುವುದಾಗಿ ಹೇಳಿದ್ದಾರೆ, ಹಾಗಾಗಿ ಅವರು ರಾಜೀನಾಮೆ ಸಲ್ಲಿಸುವ ಪ್ರಮೇಯ ಉದ್ಭವಿಸಲ್ಲ ಎಂದು ಹೇಳಿದರು.