ಬೆಂಗಳೂರು: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಗೆದಷ್ಟು ಅವ್ಯವಹಾರ ಬಯಲಾಗುತ್ತಿದೆ. ಕಳೆದ ವಾರ ಚಿನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಾಹಿತಿ ಕಲೆ ಹಾಕಿದ್ದ ಡಿಆರ್ಐ ಅಧಿಕಾರಿಗಳಿಗೆ ಈಗ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ರನ್ಯಾ ರಾವ್ ರಾಜ್ಯ ಸರ್ಕಾರದಲ್ಲಿ ಇಬ್ಬರು ಪ್ರಮುಖ, ಪ್ರಭಾವಿ ರಾಜಕಾರಣಿಗಳ ಸಂಪರ್ಕ ಹೊಂದಿದ್ದಳು ಎಂಬ ಮಾಹಿತಿ ಸಿಕ್ಕಿತ್ತು. ಆದ್ರೆ, ಈಗ ಹೊಸದಾಗಿ ಪ್ರಕರಣದಲ್ಲಿ ಸ್ವಾಮೀಜಿ ಒಬ್ಬರು ಕೂಡ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದ ಸರ್ಕಾರ ಸಿಐಡಿ ತನಿಖೆಗೆ ವಹಿಸಿದ್ರೆ, ಇತ್ತ ಡಿಆರ್ಐ ಅಧಿಕಾರಿಗಳು ಸಿಬಿಐಗೆ ಪ್ರಕರಣವನ್ನು ಹಸ್ತಾಂತರ ಮಾಡುವ ಪ್ರಕ್ರಿಯೆ ಮಾಡಿದ್ದಾರೆ. ಇದರ ಭಾಗವಾಗಿಯೇ ಕಳೆದ ಸೋಮವಾರ ಸಂಜೆ ಇಬ್ಬರು ಸಿಬಿಐ ಅಧಿಕಾರಿಗಳು ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ನಟಿ ರನ್ಯಾ ರಾವ್ ಮನೆಗೆ ಭೇಟಿ ನೀಡಿದ್ರು. ತಪಾಸಣೆ ನಡೆಸಿದ್ರು. ಈ ಸಂದರ್ಭದಲ್ಲಿ 2 ಕೋಟಿ ರೂಪಾಯಿ ನಗದು ಹಾಗೂ ಅರ್ಧ ಕೆಜಿ ಬಂಗಾರ ಕೂಡ ರನ್ಯಾ ರಾವ್ ಅವರ ಮನೆಯಲ್ಲಿ ಸಿಕ್ಕಿತ್ತು. ಈಗ ರಾಜ್ಯ ಸರ್ಕಾರದ ಇಬ್ಬರು ಪ್ರಮುಖ ಪ್ರಭಾವಿ ಸಚಿವರ ಬುಡಕ್ಕೆ ಈ ಪ್ರಕರಣ ಬಂದಿದ್ದು, ಅವರು ಯಾರು? ಪ್ರಕರಣದಲ್ಲಿ ಅವರ ಪಾತ್ರವೇನು? ಅವರ ತಲೆದಂಡಕ್ಕೆ ಆಗ್ರಹ ಏನಾದ್ರು ಮಾಡಲಾಗುತ್ತಾ? ಎಂಬ ಪ್ರಶ್ನೆ ಎದ್ದಿದೆ.
ಇನ್ನು ರನ್ಯಾ ರಾವ್ ಅವರ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಬಗ್ಗೆ ಬಿಜೆಪಿಯ ಶಾಸಕ ಸುನಿಲ್ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮೊದಲು ಗೋಲ್ಡ್ ತಂದಿದ್ದು ಎಲ್ಲಿಗೆ ಹೋಯ್ತು? ಚಾಮರಾಜಪೇಟೆಗಾಸದಾಶಿವನಗರಕ್ಕಾ? ಎಂದು ಪ್ರಶ್ನಿಸಿದ್ದು, ಚಾಮರಾಜಪೇಟೆ ಅಂದರೆ ಏನು? ಸದಾಶಿವನಗರ ಅಂದರೆ ಏನು? ಎಂಬ ಕುತೂಹಲ ಹುಟ್ಟಿದೆ.ಚಾಮರಾಜಪೇಟೆಯ ಶಾಸಕರಾಗಿ ಸರ್ಕಾರದಲ್ಲಿ ಅಂಗವೂ ಆಗಿರುವ ಜಮೀರ್ ಅಹ್ಮದ್ ಖಾನ್ ಅವರ ಹೆಸರು ಹೇಳದೇ ಸುನಿಲ್ಕುಮಾರ್ ಏನಾದ್ರೂ ಟಾಂಗ್ ಕೊಟ್ರಾ? ಇನ್ನು ಸದಾಶಿವನಗರದಲ್ಲಿ ಸಾಕಷ್ಟು ರಾಜಕಾರಣಿಗಳ ಮನೆಗಳಿದೆ.
ಅಲ್ಲಿ ಏನಾದ್ರೂ ಟಾರ್ಗೆಟ್ ಮಾಡಿಕೊಂಡು ಸುನಿಲ್ಕುಮಾರ್ ಹೀಗೆ ಹೇಳಿದ್ರಾ? ಎಂಬ ಅನುಮಾನ ಹುಟ್ಟಿದೆ.ಇದೆಲ್ಲದರ ಮಧ್ಯೆ ಸರ್ಕಾರ ತನ್ನ ವರ್ಚಸ್ಸಿಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ.ಇಷ್ಟೆಲ್ಲದರ ಮಧ್ಯೆ, ಈ ಪ್ರಕರಣದಲ್ಲಿ ಪ್ರಬಲ ಸಮುದಾಯಕ್ಕೆ ಸೇರಿದ ಸ್ವಾಮೀಜಿ ಒಬ್ಬರು ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಅದನ್ನು ಮಾಧ್ಯಮಗಳ ಮುಂದೆ ರಿವೀಲ್ ಮಾಡಿಲ್ಲ.ಒಟ್ಟಾರೆ, ಒಂದು ಕಡೆ ಸರ್ಕಾರ ತನಗೂ ಪ್ರಕರಣಕ್ಕೆ ಸಂಬಂಧವಿಲ್ಲ ಎಂಬಂತೆ ಪಾರದರ್ಶಕ ತನಿಖೆಗೆ ಎಂದು ಸಿಐಡಿಗೆ ವಹಿಸಿದ್ರೆ, ಡಿಆರ್ಐ ಅಧಿಕಾರಿಗಳು ಸಿಬಿಐಗೆ ಕೇಸ್ ರೆಫರ್ ಮಾಡುವ ಮೂಲಕ ಹೊಸ ಆಯಾಮದಲ್ಲಿ ತನಿಖೆಯ ದಿಕ್ಕನ್ನು ಕೊಂಡೊಯ್ಯುತ್ತಿದ್ದಾರೆ. ಇದರಲ್ಲಿ ಜಯ ಯಾರ ಪಾಲಿಗೆ ಸಿಗಲಿದೆ? ಎಂಬುದೇ ಕುತೂಹಲ.