ಬೆಳಗಾವಿ: ವಿಧಾನಸಭೆಯಲ್ಲಿಂದು ಆಡಳಿತ ಪಕ್ಷದ ಸಾಲಿನಲ್ಲಿ ಸಚಿವರೂ ಸೇರಿದಂತೆ ಬಹುತೇಕ ಸದಸ್ಯರ ಹಾಜರಿ ಕಡಿಮೆ ಇದ್ದ ಕಾರಣ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಸಭಾ ಕಲಾಪದ ಆರಂಭದಲ್ಲಿ ಆಡಳಿತ ಪಕ್ಷದ ಸಾಲಿನಲ್ಲಿ ಸಚಿವರ ಮತ್ತು ಸದಸ್ಯರ ಕಡಿಮೆ ಹಾಜರಿ ಇದ್ದದ್ದನ್ನು ಗಮನಿಸಿ ಬಿಜೆಪಿ ಶಾಸಕ ಸುನೀಲ್ಕುಮಾರ್ ನಾವು ಬೆಳಿಗ್ಗೆ 10ಕ್ಕೆ ಬರುತ್ತೇವೆ.ರಾತ್ರಿ 10 ಗಂಟೆಗೆ ಸದನ ಮುಗಿಯುವವರೆಗೂ ಇರುತ್ತೇವೆ. ಆದರೆ ಆಡಳಿತ ಪಕ್ಷದ ಸದಸ್ಯರು ಸದನಕ್ಕೆ ಸರಿಯಾಗಿ ಬಾರದಿರುವುದಕ್ಕೆ ತಮ್ಮ ಆಕ್ಷೇಪ ವ್ಯಕ್ತಪಡಿಸಿ ಅಸಮಾಧಾನ ಹೊರ ಹಾಕಿದರು.
ಇದಕ್ಕೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಇದೀಗ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡಿದ್ದೇನೆ. ಪ್ರಶ್ನೆ ಕೇಳುವ ಸದಸ್ಯರು, ಉತ್ತರ ಕೊಡುವ ಸಚಿವರು ಇದ್ದಾರೆ ಎಂದು ಸುನೀಲ್ಕುಮಾರ್ ಅವರನ್ನು ಸಮಾಧಾನಪಡಿಸಿದರು.ನಂತರ ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡಾಗ ಬಹುತೇಕ ಶಾಸಕರು ತಮ್ಮ ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯುವಲ್ಲಿ ಯಶಸ್ವಿಯಾದರು.ಕೆಲ ಸದಸ್ಯರು ಪ್ರಶ್ನೆ ಕೇಳಿದವರೇ ಗೈರಾಗಿದ್ದುದು ಸಹ ಸದನದಲ್ಲಿ ಕಂಡುಬಂತು.