ನಿನ್ನೆ ಲಿಡಕರ್ ಭವನದಲ್ಲಿ ಆಯೋಜಿಸಿದ್ದ ಡಾ. ಬಾಬು ಜಗಜೀವನ್ ರಾಂ ತರಬೇತಿ ಮತ್ತು ಸಂಶೋಧನಾ ಕೇಂದ್ರ ಹಾಗೂ ಭವನದ ಉದ್ಘಾಟನೆಯನ್ನು ಇದೇ ತಿಂಗಳ 13ನೇ ತಾರೀಖು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಲೋಕಸಭಾ ಮಾಜಿ ಸ್ಪೀಕರ್ ಶ್ರೀಮತಿ ಮೀರಾ ಕುಮಾರ್ರವರ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಲು ಅದರ ಸಮುದಾಯದ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳ ಜೊತೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪ ರವರ ಅಧ್ಯಕ್ಷತೆಯಲ್ಲಿ ನಡೆದ,
ಪೂರ್ವಭಾವಿ ಸಭೆಗೆ ಸಮುದಾಯಕ್ಕೆ ಸೇರಿದ ಅಬಕಾರಿ ಸಚಿವರಾದ ಆರ್.ಬಿ.ತಿಮ್ಮಾಪುರ್ ರವರನ್ನು ಸಭೆಗೆ ಆಹ್ವಾನ ನೀಡದೆ ಕಡೆಗಣಿಸಲಾಗಿದೆ ಎಂದು ಜಾಂಬವ ಜಾಗೃತಿ ವೇದಿಕೆ ಮತ್ತು ಮತ್ತಿತರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆದಿಜಾಂಬವ ಸಮುದಾಯದ ಹಿರಿಯ ಸಚಿವರನ್ನು, ಮುಖಂಡರನ್ನು ಸಮಾಜ ಕಲ್ಯಾಣ ಇಲಾಖೆ ಸಚಿವರು ಅನೇಕ ಸಭೆಗಳಿಗೆ ಆಹ್ವಾನ ನೀಡದೆ ಪದೇಪದೇ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆದಿಜಾಂಬವ ಸಮುದಾಯ ಹೆಚ್ಚಿನ ಮತಗಳನ್ನು ನೀಡಿ ಪಕ್ಷವನ್ನು ಅಧಿಕಾರಕ್ಕೆ ತರಲು ದೊಡ್ಡ ಪ್ರಮಾಣದಲ್ಲಿ ಸಹಕಾರ ನೀಡಿದ್ದಾರೆ.
ಆದರೆ ಸಮಾಜ ಕಲ್ಯಾಣ ಸಚಿವರು ಆದಿಜಾಂಬವ ಸಮುದಾಯದ ನಾಯಕರನ್ನು ಮತ್ತು ಸಮುದಾಯವನ್ನು ಕಡೆಗಣಿಸುತ್ತಿರುವುದಕ್ಕೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿ ಉಗ್ರ ಹೋರಾಟ ನಡೆಸಲಾಗುವುದು ಅದರಿಂದ ಕೂಡಲೇ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದೆ ನಡೆಯುವ ಎಲ್ಲಾ ಉಪಚುನಾವಣೆಯಲ್ಲಿ ಆದಿಜಾಂಬವ ಸಮುದಾಯವು ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಜಾಂಬವ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರ.ನರಸಿಂಹಮೂರ್ತಿ ಮತ್ತು ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.



