ಬೆಂಗಳೂರು: ಕೈಗಾರಿಕಾ ಕ್ಷೇತ್ರ ಹಾಗೂ ರಾಜ್ಯಕ್ಕೆ ಹೂಡಿಕೆದಾರರನ್ನು ಆಕರ್ಷಿಸಲು ಮುಂದಾಗಿರುವ ಸಚಿವ ಎಂ.ಬಿ. ಪಾಟೀಲ್ ಅವರನ್ನು 2024ರ ಸಾಲಿನಲ್ಲಿ ಪ್ರೆಸ್ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ರುವಾರಿ ಸಚಿವರಾದ ಕೆ.ಎಚ್.ಮುನಿಯಪ್ಪ, ಕೆ.ಜೆ. ಜಾರ್ಜ್, ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ವರ್ಷದ ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸುವರ್ಣ ಕರ್ನಾಟಕ ಸಂಭ್ರಮದ ಅಂಗವಾಗಿ ಇಂದು ಸಂಜೆ ಪತ್ರಿಕೆಯ ಮುಖ್ಯ ವರದಿಗಾರರಾದ ಕೆ.ಎಸ್.ಸೋಮಶೇಖರ್(ಸೋಮಣ್ಣ) ಸೇರಿದಂತೆ ಈ ವರ್ಷ ಪ್ರೆಸ್ಕ್ಲಬ್ನ 50 ಮಂದಿ ಸದಸ್ಯರನ್ನು ಜೀವಮಾನ ಸಾಧನೆಗಾಗಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಉದಯ್ಕುಮಾರ್ ಎನ್., ಸಾಂಬಸದಾಶಿವ ರೆಡ್ಡಿ ಆರ್.ಪಿ., ದಯಾಶಂಕರ್ ಮೈಲಿ, ಲೋಕೇಶ್ ಕಾಯರ್ಗ, ಅಲ್ಫೋನ್ಸ್ ವಿ. ರಾಜ್, ಶಿವರಾಮ್, ಜಿ.ಆರ್.ಎನ್. ಸೋಮಶೇಖರ್, ಅಲ್ಪೆರ್ಡ್ ಟೆನಿಸನ್, ಎಂ.ಪಿ. ಸುಶೀಲಾ, ರಮೇಶ್ ಸಿಜಿ, ರಮೇಶ್ಬಾಬು ಬಿ, ರಾಘವನ್ ಟಿ, ನಾಗೇಶ್ ಪ್ರಭು, ವಿನೋದ್ಕುಮಾರ್ ಬಿ ನಾಯ್ಕ್, ಮನುಜ ವೀರಪ್ಪ, ದೇವಿಪ್ರಸಾದ್ ರೈ, ಕೆ.ಎಚ್. ಪ್ರಕಾಶ್ ಸಿ., ಉಮೇಶ್,
ಶಿವಕುಮಾರ್ ಕೆ., ರಾಜುಮಳವಳ್ಳಿ ಎಸ್., ಜಯಶ್ರೀ ಸಿಬಿ., ಪುಣ್ಯವತಿ ಎಚ್.ಪಿ, ಶ್ರೀಕಾಂತ್ ಎಂ., ಶೈಲೇಂದ್ರ ಬೋಜಕ್(ಮುನ್ನಾ), ಸಿದ್ದೆಗೌಡ, ಜಗನ್ನಾಥ್ ಕೆಎಸ್., ಜಯಪ್ರಕಾಶ್ ಆರ್.ಎಚ್., ಗಣೇಶ್ ಕೆ.ಎಸ್., ಮೊಹಮ್ಮದ್ ಇಸ್ಮಾಯಿಲ್ ಎನ್.ಎ., ಶಿವಕುಮಾರ್ ಮೆಣಸಿನಕಾಯಿ, ಸತೀಶ್ಕುಮಾರ್ ಎಂ., ಗಂಗಾಧರ್ ಜಿ.ಎಸ್., ಅನೀಸ್ ನಿಸಾರ್ ಅಹಮ್ಮದ್, ಜಗದೀಶ್ ಬೆಳಿಯಪ್ಪ, ಎಂ.ಆರ್. ಸುರೇಶ್, ಹರಿಪ್ರಸಾದ್, ಯತಿರಾಜು, ರಘುನಾಥ್ ಚಹ, ಲಕ್ಷ್ಮೀ ಪ್ರಸನ್ನ ಆರ್.ಎಚ್.(ಬಾಬು), ಪಂಕಜ ಕೆ.ಎಂ., ರಮೇಶ್ ಎಂ.(ಪಾಳ್ಯ), ಕೆಂಚೇಗೌಡ, ಸತೀಶ್ ಎಂ.ಎಸ್., ಕಾಂತರಾಜ್ ಅರಸ್ ಸೇರಿದಂತೆ 50 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರೆಸ್ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್ ಇಂದುಸಂಜೆಗೆ ತಿಳಿಸಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಸಾಧಕರಿಗೆ ಇದೇ ಸಂದರ್ಬಧಲ್ಲಿ ವಿಶೇಷ ಗೌರ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿರುವ ಅವರು, ಜಾಣಗೆರೆ ವೆಂಕಟರಾಮಯ್ಯ, ಇಂದೂದರ ಹೊನ್ನಾಪುರ, ಜಿ.ಎಸ್. ಕೃಷ್ಣಮೂರ್ತಿ, ಶ್ರೀ ವತ್ಸ್ ನಾಡಿಗ್ ಹಾಗೂ ವೈದ್ಯಕ್ಷೇತ್ರ ಡಾ. ನಾಗೇಶ್ ಬಸವರಜಾ ಅವರಿಗೆ ಗೌರವ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿರುವ ಅವರು ಇದೇ ತಿಂಗಳ 12ರಂದು ಪ್ರೆಸ್ಕ್ಲಬ್ ಆವರಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.