ಬೆAಗಳೂರು : ಪಶ್ಚಿಮ ಬಂಗಾಳದ ಗಾರೆ ಕೆಲಸ ಮಾಡುವ ವ್ಯಕ್ತಿಗಳು ರಾತ್ರಿ ಸಣ್ಣ ವಿಷಯಕ್ಕೆ ಪರಸ್ಪರ ಕುಡಿದು ಗಲಾಟೆ ಮಾಡಿಕೊಂಡು ವ್ಯಕ್ತಿಯೊಬ್ಬ ಕೊಲೆಯಾಗಿರುವ ಘಟನೆ ನಡೆದಿದೆ.
ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪಿ ನಗರದ ಎಂಟನೇ ಹಂತದ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ದೀಪು ಸರ್ಕಾರ ೩೦ ವರ್ಷ ಎಂಬ ವ್ಯಕ್ತಿಯನ್ನು ದೀಪು ಮಂಡಲ ೨೭ ವರ್ಷ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುತ್ತಾನೆ.
ಕೋಣನಕುಂಟೆ ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯನ್ನು ಬಂಧಿಸಲು ಕ್ರಮ ಕೈಗೊಂಡಿರುತ್ತಾರೆ. ಇಂದು ಬೆಳಿಗ್ಗೆ ಘಟನೆ ವರದಿಯಾಗಿದೆ.



