ವಿಶ್ವದ ನಂ.1 ಆಟಗಾರ ಜನ್ನಿಕ್ ಸಿನ್ನರ್ ಆಸ್ಪ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ.ರಾಡ್ ಲೇವರ್ ಅರೆನಾದಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ 23 ವರ್ಷದ ಇಟಲಿ ಆಟಗಾರ ಸಿನ್ನರ್ 6-3, 7-6 (7-4), 6-3 ನೇರ ಸೆಟ್ಗಳಿಂದ ಎರಡನೇ ಶ್ರೇಯಾಂಕಿತ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಗೆದ್ದು ಪ್ರಶಸ್ತಿಗೆ ಮುತ್ತಿಟ್ಟರು.
ಈ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದ ಜನ್ನಿಕ್ ಸಿನ್ನರ್ ಅವರು 35,00,000 ಆಸ್ಟ್ರೇಲಿಯನ್ ಡಾಲರ್ (19.05 ಕೋಟಿ ರೂಪಾಯಿ) ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ. ರನ್ನರ್ ಅಪ್ ಜೈರವ್ ಗೂ ಕಡಿಮೆಯೇನಿಲ್ಲ. ಅವರೂ 10.34 ಕೋಟಿ ರೂಪಾಯಿಯನ್ನು ಮನೆಗೆ ಕೊಂಡೊಯ್ದರು. ಎರಡು ಗಂಟೆ 42 ನಿಮಿಷ ನಡೆದ ಹೋರಾಟದ ಮೂರು ಸೆಟ್ಗಳ ಫೈನಲ್ ಪಂದ್ಯದಲ್ಲಿ ಪ್ರಭುತ್ವ ಸಾಧಿಸಿದ ಇಟಲಿ ಆಟಗಾರ, ತಮ್ಮ ತಂಡದೊಂದಿಗೆ ಸಂಭ್ರಮಿಸುವ ಮೊದಲು ಎರಡು ಕೈಗಳನ್ನು ಮೇಲಕೆತ್ತಿ ವಿಜಯದ ನಗೆ ಬೀರಿದರು. 2024ರಲ್ಲಿ ಆಸ್ಪ್ರೇಲಿಯನ್ ಓಪನ್ ಗೆದ್ದು ಮೊದಲ ಸಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗೆ ಭಾಜನರಾಗಿದ್ದ ಸಿನ್ನರ್, ಕಳೆದ ವರ್ಷಾಂತ್ಯದಲ್ಲಿ ಯುಎಸ್ ಓಪನ್ ಜಯಿಸಿದ್ದರು. ಈಗ ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಗೆದ್ದಿರುವ ಸಿನ್ನರ್ ಭರ್ಜರಿಯಾಗಿಯೇ ವರ್ಷಾರಂಭ ಮಾಡಿದ್ದಾರೆ.
ಯಾರಿಗೆಷ್ಟು ಬಹುಮಾನ? ಈ ಬಾರಿ ಆಸ್ಚ್ರೇಲಿನ್ ಓಪನ್ ಟೆನಿಸ್ ಟೂರ್ನಿಯ ಬಹುಮಾನದ ಮೊತ್ತವನ್ನು ಕಳೆದ ಬಾರಿಗಿಂತ ಶೇಕಡಾ 10ರಿಂದ 11ರಷ್ಟು ಏರಿಸಲಾಗಿದೆ. ಹೀಗಾಗಿ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಗಳಾದವರಿಗೆ 35,00,000 ಆಸ್ಟ್ರೇಲಿಯನ್ ಡಾಲರ್ ಬಹುಮಾನವಾಗಿ ನೀಡಲಾಗಿದೆ. ಅದನ್ನು ಭಾರತೀಯ ರುಪಾಯಿಗೆ ಪರಿವರ್ತಿಸಿದರೆ 19.05 ಕೋಟಿ ರೂಪಾಯಿ ಆಗುತ್ತದೆ. ಇನ್ನು ರನ್ನರ್ ಆಪ್ ಸ್ಥಾನ ಪಡೆದವರಿಗೆ 19,00,000 ಆಸ್ಟ್ರೇಲಿಯನ್ ಡಾಲಕ್ ಮೊತ್ತವನ್ನು ನೀಡಲಾಗಿದೆ. ಅಂದರೆ ಸುಮಾರು 10.34 ಕೋಟಿ ರೂಪಾಯಿ ಪಡೆಯಲಿದ್ದಾರೆ. ಪುರುಷರ ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿ ಪ್ರಶಸ್ತಿಯ ಮ1ತ್ತ ಸಮನಾಗಿರುತ್ತದೆ.