ಕಲಬುರಗಿ: ಪಕ್ಷದ ಮುಖಂಡ ಹಾಗೂ ಲೋಕೋಪಯೋಗಿ ಸಚಿವ ಸತೀಶ್ಜಾರಕಿಹೊಳಿ ತಮ್ಮನ್ನು ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿರುವುದರಲ್ಲಿ ವಿಶೇಷ ಏನು ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.ಕಲಬುರಗಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಐಸಿಸಿ ಅಧ್ಯಕ್ಷ ಇದ್ದೇನೆ. ಹಾಗಾಗಿ ಎಲ್ಲರು ಬಂದು ಮಾತನಾಡುತ್ತಾರೆ. ಇದೇನೂ ದೊಡ್ಡ ಮಾತಾ ಎಂದು ಪ್ರಶ್ನಿಸಿದ್ದಾರೆ.
ನನ್ನನ್ನು ಭೇಟಿ ಮಾಡಲು ನಮ್ಮ ರಾಜ್ಯದವರು ಬರ್ತಾರೆ, ನಮ್ಮ ರಾಜ್ಯದವರಿಗೆ ಬೇಗ ಭೇಟಿಗೆ ಅವಕಾಶ ಸಿಗುತ್ತದೆ. ಸತೀಶ್ ಬರ್ತಾರೆ, ಪರಮೇಶ್ವರ್ ಬರ್ತಾರೆ, ಡಿಕೆಶಿ ಬರ್ತಾರೆ, ಸಿದ್ದರಾಮಯ್ಯ ಕರೆ ಮಾಡುತ್ತಾರೆ. ಇದು ದೊಡ್ಡ ವಿಷಯಾನಾ ಎಂದಿದ್ದಾರೆ.
ಎಲ್ಲ ರಾಜ್ಯಗಳ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಯಾಗುತ್ತದೆ. ಇನ್ನು 8 ದಿನದಲ್ಲೇ ಎಲ್ಲಾ ಬದಲಾವಣೆ ಮುಗಿಯುತ್ತದೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಕರ್ನಾಟಕದ ರಾಜ್ಯಾಧ್ಯಕ್ಷರ ಬದಲಾವಣೆಯಾಗುತ್ತದೆ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿ ಈ ಬಗ್ಗೆ ನಿರ್ದಿಷ್ಟವಾಗಿ ಏನನ್ನು ಹೇಳಲು ಸಾಧ್ಯವಿಲ್ಲ. ಒಂದೊಂದು ದಿನ ಒಂದೊಂದು ರಾಜ್ಯಾಧ್ಯಕ್ಷರ ಬದಲಾವಣೆಯೆಂದಷ್ಟೆ ಹೇಳಿದ್ದಾರೆ.