ಬೆಂಗಳೂರು: ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭವಾಗಿದ್ದು, ಮೂರನೇ ದಿನಕ್ಕೆ ಕಾಲಿಟ್ಟಿದೆ. ಮೂರನೇ ದಿನವಾದ ಇಂದು ಅಧಿವೇಶನ ಆರಂಭಗೊಂಡು ಅಧಿವೇಶನ ಆರಂಭದಲ್ಲೇ ಜಿಟಿ ಮಾಲ್ ವಿಚಾರವಾಗಿ ಚರ್ಚೆ ನಡೆಯಿತು.
ಬೆಂಗಳೂರಿನ ಜಿಟಿ ಮಾಲ್ ಒಳಗಡೆ ಓರ್ವ ರೈತರಿಗೆ ಬಿಡದೆಅವಮಾನ ಮಾಡಿರುವ ವಿಚಾರ ವಾಗಿ ಚರ್ಚೆ ನಡೆಯಿತು. ರೈತನನ್ನುಮಾಲ್ ಒಳಗಡೆ ಬಿಡದೆ ಅವಮಾನಿ ಸಲಾಗಿದೆ ಎಂದು ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಒಕ್ಕೊ ರಲಿನಿಂದ ಧ್ವನಿ ಎತ್ತಿದರು.ಶಾಸಕರ ಒತ್ತಾಯಾಕ್ಕೆ ಮಣಿದ ಸರ್ಕಾರ ಮಾಗಡಿ ರಸ್ತೆಯಲ್ಲಿರುವ ಜಿ.ಟಿ.ಮಾಲ್ ಅನ್ನು ಏಳು ದಿನ ಮುಚ್ಚಿಸಲಾಗುವುದು ಎಂದು ಸಚಿವರು ಸದನಕ್ಕೆ ತಿಳಿಸಿದರು.
ಮಾಲ್ ಸೆಕ್ಯುರಿಟಿ ಏಜೆನ್ಸಿ ಮೇಲೆ ಕ್ರಮ ಆಗಬೇಕು. ಮಾಲ್ ಮಾಲೀಕರ ಮೇಲೆ ಎಫ್ಐಆರ್ ಆಗಬೇಕು ಎಂದು ಗುರುಮಿಠಕಲ್ ಕಾಂಗ್ರೆಸ್ ಶಾಸಕ ಶರಣಗೌಡ ಕಂದಕೂರ ಒತ್ತಾಯಿಸಿದರು. ಬಳಿಕ ಮಾತನಾಡಿದ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ವರದಿ ತರಿಸಿಕೊಂಡು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಇದಕ್ಕೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಆಕ್ಷೇಪ ವ್ಯಕ್ತಪಡಿಸಿದ್ದು “ವರದಿ ತರಿಸಿಕೊಂಡು ಏನು ಕ್ರಮ ಕೈಗೊಳ್ಳುತ್ತೀರಿ? ಸಚಿವರಾಗಿ ಈ ರೀತಿ ಮಾತಾಡಬೇಡಿ. ಇದು ರೈತರ ವಿಚಾರ ಗಂಭೀರವಾಗಿ ಪರಿಗಣಿಸಿ.
ಕೂಡಲೆ ಮಾಲ್ಗೆ ಒಂದು ವಾರ ವಿದ್ಯುತ್ ಸರಬರಾಜು ಕಟ್ ಮಾಡಿ ಎಂದು ಒತ್ತಾಯಿಸಿದರು.ಬಳಿಕ ವಿಧಾನಸಭೆ ಸಭಾಪತಿ ಯುಟಿ ಖಾದರ್, ಸರ್ಕಾರ ಏನು ಕ್ರಮ ಕೈಗೊಳ್ಳುತ್ತೆವೆ ಎಂದು ಸ್ಪಷ್ಟಪಡಿಸಿ ಎಂದು ಸಚಿವರನ್ನು ಪ್ರಶ್ನಿಸಿದರು.ಈ ವೇಳೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ “ಈಗಾಗಲೇ ಬಿಬಿಎಂಪಿ ಮುಖ್ಯ ಆಯುಕ್ತರ ಜೊತೆ ಚರ್ಚೆ ಮಾತಾಡಿದ್ದೇವೆ. 7 ದಿನ ಜಿ.ಟಿ.ಮಾಲ್ ಮುಚ್ಚಿಸಲಾಗುತ್ತದೆ. ಕಾನೂನಿನಲ್ಲಿ ಅವಕಾಶ ಇದೆ ಎಂದಿದ್ದಾರೆ” ಎಂದು ತಿಳಿಸಿದರು.



