ಬೆಳಗಾವಿ: ನಿನ್ನೆ ಬೆಳಗ್ಗೆ 10 ಗಂಟೆಗೆ ಶುರುವಾದ ವಿಧಾನಸಭೆಯ ಕಲಾಪ ಇಂದು ಬೆಳಗ್ಗೆ ಒಂದು ಗಂಟೆಯವರೆಗೆ ನಡೆದಿದೆ. ಕಲಾಪವನ್ನು ನಡೆಸಿದ ಸಭಾಧ್ಯಕ್ಷ ಯುಟಿ ಖಾದರ್ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ್ದಾರೆ. ದಾಖಲೆ ಸೃಷ್ಟಿಸುವ ಉದ್ದೇಶದಿಂದ ಸುದೀರ್ಘ ಅವಧಿಯವರೆಗೆ ಕಲಾಪ ನಡೆಸಲಿಲ್ಲ, ಬಿಸಿನೆಸ್ ಅಜೆಂಡಾದಲ್ಲಿದ್ದಿದ್ದನ್ನು ಮುಗಿಸಲೇಬೇಕೆಂಬ ಉಮೇದಿ ಎಲ್ಲರಲ್ಲೂ ಇತ್ತು, ಆಡಳಿತ ಪಕ್ಷದ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಸಹಕಾರ ನೀಡಿದರು, ಶಾಸಕರು ಸಹ ಜನಪ್ರತಿನಿಧಿಗಳಾಗಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು; ಉತ್ತರ ಕರ್ನಾಟಕ, ಪ್ರಮುಖ ಅಂಶಗಳು, ಪ್ರಶ್ನೋತ್ತರ ಮತ್ತು 60 ಗಮನ ಸೆಳೆಯುವ ಸೂಚನೆಗಳ ಮೇಲೆ ಚರ್ಚೆ ನಡೆಯಿತು ಎಂದು ಖಾದರ್ ಹೇಳಿದರು.