ಬೆಂಗಳೂರು: ಇಂದು ಅಂತರಾಷ್ಟ್ರೀಯ ಸನ್ನೆ ಭಾಷೆದಿನ ಆಗಿರುವುದರಿಂದ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ರವರು ಮೂಕಿ ಬಾಷೆಯಲ್ಲಿ ಸನ್ನೆ ಮಾಡುವ ಮೋಕ್ಷ ಕುಮಾರಿ ಎಂಬ ಮಹಿಳೆಯನ್ನು ಕರೆದು ಪತ್ರಿಕಾಗೋಷ್ಠಿಯ ಕೊಠಡಿಯಲ್ಲಿ ಪಕ್ಕದಲ್ಲಿ ನಿಲ್ಲಿಸಿಕೊಂಡು ಆಯುಕ್ತರು ಮಾತನಾಡುವ ಪತ್ರಿಕಾ ಗೋಷ್ಠಿಯನ್ನು ಮಹಿಳೆ ಸನ್ಹೆ ಮೂಲಕ ಪ್ರಸ್ತುತಪಡಿಸಿದರು. ಪೂರ್ತಿ ಪತ್ರಿಕಾಗೋಷ್ಠಿಯನ್ನು ಆ ಮಹಿಳೆ ಸನ್ನೆ ಮೂಲಕ ಪ್ರಸ್ತುತಪಡಿಸಿ ಜನಮನ ಸೆಳೆದರು.