ಬೆಂಗಳೂರು: ನಗರದ ಉದಯಭಾನು ಕಲಾಸಂಘದಿAದ ನಡಿಯುತ್ತಿರುವ ಕನ್ನಡ ಹವ್ಯಾಸ ರಂಗೋತ್ಸವ ೨೦೨೪ ರಲ್ಲಿ ಭಾಗವಾಗಿ ನಾಲ್ಕನೇ ದಿನ ಗುರುವಾರ ರಾತ್ರಿ ಚಿಕ್ಕಬಳ್ಳಾಪುರದ ಐಶ್ವರ್ಯ ಕಲಾನಿಕೇತನ್ ರವರ ಬೃಂಧ ಪ್ರದರ್ಶಿಸಿದ ನಗೆ ನಾಟಕ ಸಭಿಕರ ಹೊಟ್ಟೆ ಹುಣ್ಣಾಗುವಂತೆ ನಗಿಸಿತು.ಪಾಪ ಪಾಂಡು,ಸಿಲ್ಲಿಲಿಲ್ಲಿ ಧಾರಾವಾಹಿ ಗಳನ್ನು ಬರದ ಎಂಎಸ್ ನರಸಿಂಹಮೂರ್ತಿ ಬರದ “ಸನ್ಮಾನ ಸುಖ” ನಾಟಕವನ್ನು ಪ್ರದರ್ಶಿಸಲಾಯಿತು.
ಸನ್ಮಾನಕ್ಕಾಗಿ ಒಬ್ಬ ಸಾಹಿತಿ ದಂಪತಿಗಳು ಹೇಗೆ ಮೋಸಹೋಗು ತ್ತಾರೆ ಎಂಬ ಹಾಸ್ಯ ಸನ್ನಿ ವೇಶಗಳಿಂದ ನಾಟಕ ಕೂಡಿತ್ತು.ಪ್ರಸನ್ನ ಕುಮಾರ್ ರವರ ನಿರ್ಧೇಶನದಲ್ಲಿ ಪಾತ್ರ ವರ್ಗ ಉತ್ತಮ ಅಭಿನಯವನ್ನು ಪ್ರದರ್ಶಿಸಿದರು. ಸಾಹಿತಿ ವಿಶ್ವ ಪಾತ್ರದಲ್ಲಿ ರಾಘವೇಂದ್ರ ನಾಡಿಗೆ ನಟನೆ, ಅವರೊಂದಿಗೆ ಧರ್ಮಪತ್ನಿ ವಿಶಾಲು ಪಾತ್ರದಲ್ಲಿ ರೋಹಿಣಿ ಅಭಿನಯ ಉತ್ತಮ ವಾಗಿತ್ತು. ಹೂವು ವ್ಯಾಪಾರ ಮಾಡುವ ಸನ್ನಿವೇಶದಲ್ಲಿ ವಿಶಾಲು ಹೂವಾಡಗಿತ್ತಿ ಸರೋಜ ಯೊಂದಿಗೆ ವ್ಯಾಪಾರದಲ್ಲಿ ತೊಡಗಿರುವುದು,ಟಿವಿ ವರದಿಗಾರರಾಗಿ ರಾಜೇಶ್ ಕಶ್ಯಪ್ ಬಂದಾಗ ರೋಹಿಣಿ ರವರ ನಟನೆ,ಅಭಿನಯಕ್ಕೆ ತಕ್ಕ ಸಂಭಾಷಣೆಯ ಉಚ್ಚಾರಣೆ ಸಭಿಕರ ಮನಮುಟ್ಟುವಂತೆ ಇತ್ತು. ಎಂಎಲ್ಎ ಆಗಿ ರಾಜೇಶ್ ಕಶ್ಯಪ್ ಗಂಭೀರವಾದ ನಟನೆ ಹಾಗು ಉಡುಗೆ ಪಸಂದಾಗಿತ್ತು. ಒಟ್ಟಾರೆ ಪಾತ್ರಗಳಲ್ಲಿ ಲೀನವಾದ ಪಾತ್ರವರ್ಗ,ಕಲಾವಿದರನ್ನು ಯಶಶ್ವಿಯಾಗಿ ಬಳಿಸಿಕೊಳ್ಳು ವಲ್ಲಿ ನಿರ್ದೇಶಕರಾದ ಪ್ರಸನ್ನ ಕುಮರ್ ಯಶಶ್ವಿ ಯಾದರು ಎನ್ನ ಬಹುದು. ರಾಮಾಶಾಸ್ತಿç ಪಾತ್ರದಲ್ಲಿ ಅನಂತಕೃಷ್ಣ ಉತ್ತಮವಾಗಿ ನಟಿಸಿದರು.
ಅತಿಥಿಯಾಗಿ ಭಾಗವಹಿಸಿದ ಹಿರಿಯ ಪತ್ರಕರ್ತ ಲೇಪಾಕ್ಷಿ ಸಂತೋಷರಾವ್ ಮಾತನಾಡಿ ಟಿವಿ,ಮೊಬೈಲ್ ಭರಾಟೆಯ ಕಾಲದಲ್ಲಿ ರಂಗಭೂಮಿಯನ್ನು ಆದರಣೆ ಮಾಡುತ್ತಿರುವ ಪ್ರೇಕ್ಷಕ ವರ್ಗದವರನ್ನು ಅಭಿನಂದಿಸಿದರು.
ಬಿಚಿ ರವರ ಮಾತುಗಳನ್ನು ಮೆಲಕು ಹಾಕುತ್ತಾ ನಗಿದರೇ ಹಾಪೀ,ನಗದಿದ್ದರೇ ಬಿಪಿ,ನಗಲಾರದವನು ಪಾಪಿ ಎನ್ನುವ ಮಾತಿನಂತೆ ಸಂಭಾಷಣೆ ಹಾಸ್ಯಮಯವಾಗಿತ್ತು.ರಮಾನಂದ ಪತ್ರದಲ್ಲಿ ಮಂಜುನಾಥ್,ರಾಜೀವ್ ರಜನೀಕುಮಾರ್,ರಾಜಣ್ಣ ನಾಗಿ ಶರತ್,ಗೋಪಿ ಪಾತ್ರದಲ್ಲಿ ಉಗ್ರಂಸುರೇಶ್,ಹೂವಾಡಗಿತ್ತಿ ಸರೋಜ ಪಾತ್ರದಲ್ಲಿ ಮಂಜುಳ, ಎಮ್ಮೆಲ್ಯೆ ಆಪ್ತಕಾರ್ಯಧರ್ಶಿ ಯಾಗಿ ವೆಂಕಟೇಶ್ ಅವರವರ ಪಾತ್ರದಲ್ಲಿ ಉತ್ತಮ ಅಭಿನಯ ಪ್ರದಶಿಸಿದರು.
ಸಭಿಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ ಹಾಸ್ಯ ನಾಟಕ `ಸನ್ಮಾನ ಸುಖ’
