ಬೆಳಗಾವಿ: ರಾಜಕಾರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎದುರಾದ ಹತ್ತು-ಹಲವು ಸಮಸ್ಯೆಗಳನ್ನು ಸಂಯಮ,ಸಮಚಿತ್ತ ಹಾಗೂ ದೂರದೃಷ್ಟಿತ್ವ ಸಮರ್ಥವಾಗಿ ನಿಭಾಯಿಸಿದ ಕೀರ್ತಿಗೆ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (ಎಸ್ಎಮ್ ಕೆ)ಅವರು ಪಾತ್ರ ರಾಗಿದ್ದರು.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅವರಿಗೆ ಹಲವಾರು ಕ್ಲಿಷ್ಟಕರ ಸಮಸ್ಯೆಗಳು ಎದರಾಗಿದ್ದವು.
ಒಂದೆಡೆ ರಾಜ್ಯದಲ್ಲಿ ರಾಜ್ಯದಲ್ಲಿ ತಲೆದೋರಿದ್ದ ತೀವ್ರ ಬರಗಾಲ ಪರಿಸ್ಥಿತಿ, ಮತ್ತೊಂದೆಡೆ ಕಾಡುಗಳ್ಳ ವೀರಪ್ಪನ್ ನಿಂದ ವರನಟ ಡಾ.ರಾಜಕುಮಾರ್ ಅಪಹರಣ ಸೇರಿದಂತೆ ಹಲವಾರು ಸಮಸ್ಯೆಗಳು ಎದರಾಗಿದ್ದವು. ಎದೆಗುಂದದೆ ಅವುಗಳನ್ನು ನಿಭಾಯಿಸಲು ಅವರು ಸಾಕಷ್ಟು ಬೆವರು ಹರಿಸಿದ್ದರು. ಅದೇ ಸಂದರ್ಭದಲ್ಲಿ ಹಿಂದುಳಿದ ಹೈದರಾಬಾದ್ -ಕರ್ನಾಟಕ ಭಾಗದಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸಿದರು.
ಮಳೆಯ ಅಭಾವ ಕಾರಣ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಕುಸಿದಿತ್ತು. ಅಂತಹ ಸಂದರ್ಭದಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಕುರಿತು ತಮಿಳುನಾಡು ಸರ್ಕಾರ ಅನಗತ್ಯವಾಗಿ ತೆಗೆದ ತಗಾದೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಆ ಸಂದರ್ಭದಲ್ಲಿ ಅವರು ನೀರಾವರಿ ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ ಪರಿಹಾರ ಕಂಡುಕೊಳ್ಳಲು ಹೆಣಗಾಡುವಂತಾಗಿತ್ತು.
ಜೊತೆಗೆ ಕಾನೂನು ಹೋರಾಟ ನಡೆಸುವಲ್ಲಿಯೂ ಹಿಂದೆ ಬೀಳಲಿಲ್ಲ. ರಾಜ್ಯದ ನೆಲ, ಜಲ ರಕ್ಷಣೆ ಮಾಡಲು ಕಟಿಬದ್ಧತೆ ಪ್ರದರ್ಶಿಸಿದ್ದ ಅವರು, ನೀರಾವರಿ ವಿಚಾರದಲ್ಲಿ ಅನುಭವಿ ರಾಜಕಾರಣಿ ಎಚ್.ಡಿ.ದೇವೇಗೌಡ ಅವರ ಸಲಹೆ ಸೂಚನೆಗಳನ್ನು ಪಡೆಯಲು ಮುಂದಾದದ್ದು ಅವರ ಮುತ್ಸದ್ದಿ ತನಕ್ಕೆ ನಿದರ್ಶನವಾಗಿದೆ.
ವೀರಪ್ಪನ್ ವಶದಲ್ಲಿ 108 ದಿನಗಳ ಕಾಲ ಇದ್ದ ವರನಟ ರಾಜ್ ಕುಮಾರ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಗೊಳಿಸಲು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ.. ಒಬ್ಬ ದಕ್ಷ ಆಡಳಿತಗಾರರಾಗಿದ್ದ ಕೃಷ್ಣ ಅವರು, ಈ ವಿಚಾರದಲ್ಲಿ ಅತ್ಯಂತ ಜಾಣ್ಮೆ ಮತ್ತು ತಾಳ್ಮೆ ಯಂದಲೇ ವರ್ತಿಸಿ ಬಿಕ್ಕಟ್ಟು ಪರಹರಿಸಿದ್ದು ಅವರ ರಾಜಕೀಯ ಜೀವನದಲ್ಲಿ ಬಹು ದೊಡ್ಡ ಸಾಧನೆಯೇ ಸರಿ…
ಹೀಗೆ ಸಾಲು ಸಾಲು ಸವಾಲುಗಳನ್ನು ಚಾಣಾಕ್ಷತನದಿಂದ ನಿಭಾಯಿಸಿದ್ದ ಅವರ ಸಮಯೋಚಿತ ರೀತಿ ನೀತಿಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.. ಮುಂದಿನ ಪೀಳಿಗೆಯ ರಾಜಕಾರಣಿ ಗಳಿಗೆ ದಾರಿದೀಪಗಳಾಗಲಿವೆ.