ಮನೋರಾಯನ ಪಾಳ್ಯದ ಎಂ.ಎಸ್.ಕಾನ್ವೆಂಟ್ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಮಾಜದಲ್ಲಿ ಸಮಾನತೆ ಬರಬೇಕಾದರೆ ಮೊದಲು ಸಂಕುಚಿತ ಮನಸ್ಥಿತಿಗಳು,ಬದಲಾಗಬೇಕು.ಮಕ್ಕಳಿಗೆ ಈಗಿನಿಂದಲೇ ಸಮಾಜವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಬೇಕು.
ಈ ನಿಟ್ಟಿನಲ್ಲಿ ನಮ್ಮ ಎಂ.ಎಸ್.ಶಾಲೆಯ ಆಡಳಿತ ಮಂಡಳಿಯು ಲೀಗಲ್ ಆವರ್ನೆಸ್ ಆಂಡ್ ವಿಸ್ಡಂಮ್ ಫಾರಂ ಸಹಯೋಗದೊಂದಿಗೆ ,ಸಂವಿಧಾನ ಅಚರಣೆ ಸಂಧರ್ಭದಲ್ಲಿ ಸಂಗಮ ಸಂಸ್ಥೆಯ ಸ್ಪೂರ್ತಿ, ನಿಚ್ಚಿತಾ ರವರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಬರಮಾಡಿಕೊಂಡು ಮಕ್ಕಳಿಗೆಸಮಾಜ,ಸಮಾನತೆ,ಲಿಂಗಸಮಾನತೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಮುಖ್ಯವಾಗಿ ಆಡಳಿತ ಮಂಡಳಿಯು ಸಮಾಜದ ಎಲ್ಲಾ ವರ್ಗದವರ ಬಗ್ಗೆ ಕಾಳಜಿಯನ್ನು ತೋರುವುದು ವಿಶೇಷ ಮುಖ್ಯವಾಗಿ ಪ್ರಾಂಶುಪಾಲರಾದ ಶ್ರೀ ಮತಿ ನಂದಿನಿ ಪ್ರಕಾಶ್,ಸಂಚಾಲಕರಾದ ,
ಶ್ರೀ ಮತಿ ನಂದಾಬಾಯಿ,ಕಾರ್ಯಕ್ರಮಕ್ಕೆ ಹೆಚ್ಚಿನ ಸಹಕಾರ ನೀಡಿ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ವಿಶೇಷವಾಗಿತ್ತು ಅಂಬೇಡ್ಕರ್ ,ಬುದ್ದ,ಕನಕ,ಕುವೆಂಪು,ಬಸವ ತತ್ವಗಳು ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬೇರೂರಬೇಕ ಎಂಬುದು ಈ ಕಾರ್ಯಕ್ರಮದ ಉದ್ದೇಶ ಎಂದು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಮತಿ ನಂದಾಬಾಯಿ ರವರು ತಿಳಿಸಿದರು ಈ ಸಂಧರ್ಭದಲ್ಲಿ ವಕೀಲರಾದ ಯೇಜಸ್ ಪಾಷ ಸಂಗಮ ಸಂಸ್ಥೆಯ ಸ್ಪೂರ್ತಿ,ನಿಚ್ಚಿತರವರು ಉಪಸ್ಥಿತರಿದ್ದರು.