ದೇವನಹಳ್ಳಿ: ದೆಹಲಿಯ ಪೇಪಾಲ್ ಫೋರಮ್ ಆಫ್ ಇಂಡಿಯಾ ಭಾರತ್ ಸೇವಕ ಸಮಾಜ ಹಾಗೂ ಗ್ಲೋಬಲ್ ಹುಮೇನ್ ಪೇಸ್ ಯೂನಿವರ್ಸಿಟಿ ಯಿಂದ ಗೌರವ ೨೦೨೪ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗಂಗವಾರ ಚೌಡಪ್ಪಹಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷ ಕಮಲೇಶ್ ಅವರಿಗೆ ಸಮಾಜ ಸೇವಕ ವೈದ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಭಿನಂಧನೆ ಸ್ವೀಕರಿಸಿದ ಬಳಿಕ ಮಾತನಾಡಿ, ಗಂಗವಾರ ಚೌಡಪ್ಪಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ಸ್ವಚ್ಛತೆ ಶಿಕ್ಷಣ, ಕ್ರೀಡೆ ಮರಂಜನೆ ಮುಂತಾದ ಚಟುವ ಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿ ಕೊಳ್ಳಲಾಗಿತ್ತು. ಸೇವಾ ನಮ್ಮನೋ ಭವ ಯಾರಲ್ಲಿ ಕಂಡುಬರುತ್ತದೆ ಅವರಿಗೆ ಸಮಾಜ ಗುರುತಿಸುತ್ತದೆ. ಕಷ್ಟದಲ್ಲಿ ಕೈ ಹಿಡಿಯುವವರು ಎದುರು ನಿಂತಾಗ ಅವರಲ್ಲಿ ದೇವರು ಕಾಣುತ್ತಾರೆ.
ಯಾರ ಕೈಕಾಲುಗಳು ಪರೋಪಕಾರಕ್ಕಾಗಿ ಮಿಡಿಯುತ್ತಿವೆಯೋ ಅಂಥವರು ಯಾರಿಗೆ ತಾನೆ ಪೂಜ್ಯರೆನಿ ಸುವುದಿಲ್ಲ? ಅಂಥವರಲ್ಲಿ ವೈದ್ಯರೂ ಕೂಡ ಒಬ್ಬರು. ನನ್ನ ವೃತ್ತಿ ಜೀವನದಲ್ಲಿ ಕೆಲವೊಂದಿಷ್ಟು ಸಮಯವನ್ನು ಸಮಾಜ ಸೇವೆಗಾಗಿ ಮೀಸಲಿಡುತ್ತೇನೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ದೆಹಲಿಯ ಗ್ಲೋಬಲ್ ಹುಮೇನ್ ಪೇಸ್ ಯೂನಿವರ್ಸಿಟಿ ಚೇರ್ಮನ್ ಡಾ|| ಪಿ ಮನೋಲಾ, ಹಿರಿಯ ಸಲಹೆಗಾರರಾದ ವೆಂಕಟೇಶನ್, ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ರಾಜ ಮನ್ ವೆಂದರ್ ಸಿಂಗ್ ಮುಖ್ಯ ಅತಿಥಿಗಳಾದ ಸಂಘಪ್ರಿಯಾ ರಾಹುಲ್, ಸಂಪತ್ ಕುಮಾರ್, ಚಂದ್ರಮೋಹನ್, ಪ್ರವೀಣ್ ಸಿಂಗ್, ವಿಪಿನಿ ಗುಪ್ತ, ತಂಗರಾಜು, ಶುಭಾಶಿಷಾಸಹಾ ಸೇರಿದಂತೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ವಿದ್ಯಾರ್ಥಿ ವಿದ್ಯಾರ್ಥಿ ನಿಯರು ಭಾಗವಹಿಸಿದ್ದರು.