ದೇಶದ ಶತಶತಮಾನಗಳ ಹಿಂದಿನ ವ್ಯವಸ್ಥೆ ಗಳು; ದೇಶಕ್ಕೆ ಆರ್ಯನ್ ರ ಪ್ರವೇಶ; ದೇಶದಲ್ಲಿ ಜಾರಿ ತಂದ ಮನುವಾದ; ಬ್ರಾಹ್ಮಣ್ಯ; ವರ್ಣಾಶ್ರಮ ನೀತಿ; ಜಾತಿ ವ್ಯವಸ್ಥೆ ; ಅಸ್ಪೃಶ್ಯತೆ; ಅನಿಷ್ಟ ಪದ್ದತಿಗಳು; ಇವುಗಳ ಮಧ್ಯೆ, ಭಾರತ ದೇಶದ ಮೇಲೆ ನಡೆದ ಗಜನಿ ಮೊಹಮ್ಮದ್ ಇತ್ಯಾದಿ ಮುಸಲ್ಮಾನ್ ದೊರೆಗಳ ನಿರಂತರ ದಾಳಿಗಳು; ಗುಲಾಮಿ ಸಂತತಿಯಿಂದ ಮೊಘಲರ ಸಂತತಿವರೆಗೆ ದೇಶದಲ್ಲಿ ನಡೆಸಿದ ಆಳ್ವಿಕೆ; 18/19 ನೇ ಶತಮಾನಗಳಲ್ಲಿ ಬ್ರಿಟಿಷರ ಆಳ್ವಿಕೆ.
ಇಂತಹ ನೂರಾರು ಕಾರಣಗಳಿಂದ – ಶತಶತಮಾನಗಳಿಂದ ದೇಶದ ಮೂಲ ನಿವಾಸಿಗಳು/ ಮೂಲ ಭಾರತೀಯರು / ಆದಿ ದ್ರಾವಿಡರು – ವಿವಿಧ ಧರ್ಮ / ಸಾವಿರಾರು ಜಾತಿಗಳಾಗಿ ಚಿದ್ರಗೊಂಡು – ದಲಿತ, ಹಿಂದುಳಿದ, ಅಲ್ಪಸಂಖ್ಯಾತರಾಗಿ, (ಅಹಿಂದ ಸಮುದಾಯಗಳಾಗಿ) ಈ ದೇಶದಲ್ಲಿ ಬದುಕುತ್ತಿದ್ದೇವೆ. ಜಾತ್ಯಾತೀತತೆ ಸಾರುವ “ಭಾರತ ಸಂವಿಧಾನ” ಈ ದೇಶದಲ್ಲಿ ಜಾರಿಗೆ ಬಂದು 75 ವರ್ಷಗಳು ಕಳೆದರೂ, ಚಿದ್ರಗೊಂಡಿರುವ ಈ ದೇಶದ ಮೂಲ ನಿವಾಸಿಗಳು, ಈಗಲೂ ಧರ್ಮ, ಜಾತಿ, ವೈಸಮ್ಯ ಮರೆತು, ಸಂಘಟಿತರಾಗಿ ಒಟ್ಟು ಭಾರತೀಯರಾಗಿ ಬದುಕಲು ಸಾಧ್ಯವಾಗಿಲ್ಲ. ಜೊತೆಗೆ ಸಮ ಸಮಾಜ ಇಲ್ಲ.
ಅಸಮಾನತೆ ರಾಷ್ಟ್ರವಾಗಿ ಮುಂದುವರೆಯುತ್ತಿದ್ದೇವೆ. 76 ವರ್ಷಗಳು ಕಳೆದರೂ ಪ್ರಮುಖವಾಗಿ ಈ ಅಹಿಂದ ಸಮುದಾಯಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಬಡವರ ಸಂಖ್ಯೆ ಜಾಸ್ತಿ ಇದೆ. ಒಟ್ಟಾರೆ ಈ ದೇಶದ ಸಮಾಜದಲ್ಲಿ ಅಸಮಾನತೆ ಮುಂದುವರೆದಿದೆ. ಬಹುತೇಕ ಜನರು – ಧರ್ಮ, ಜಾತಿ, ಒಳಜಾತಿ, ಪಂಥ, ಮೇಲು ಕೀಳು ಇತ್ಯಾದಿಗಳಲ್ಲಿ ದೇಹ ಮನಸುಗಳ ತುಂಬಾ ವಿಷ ತುಂಬಿಕೊಂಡು ಬದುಕುತ್ತಿದ್ದಾರೆ.
ದೇಶದ ಈ ಸ್ಥಿತಿಗತಿಗಳಲ್ಲಿ ಅಹಿಂದ ಸಮುದಾಯಗಳಲ್ಲಿನ ಕೆಲವು ವಿಚಾರವಾದಿಗಳು, ಸಮಾನ ಮನಸ್ಕರು, ಚರ್ಚಿಸಿ, ಮುಂದಿನ ಸಮುದಾಯಗಳ ಭವಿಷ್ಯವನ್ನು ಯೋಚಿಸಿ, ಕರ್ನಾಟಕ ರಾಜ್ಯದಲ್ಲಿ ಈ ಹಿಂದೆ ಇದ್ದ ಅಹಿಂದ ಸಂಘಟನೆಯನ್ನು ಪುನರ್ ನವೀಕರಿಸಿ, “ಅಹಿಂದ” – -ಚಳುವಳಿ ಎಂಬ “ಸಂಘಟನೆ” ಯನ್ನು ಜೊತೆಗೆ ಅಹಿಂದ ಸಮುದಾಯಗಳಲ್ಲಿನ ಬಡವರಿಗೆ ಆರ್ಥಿಕ ಶಕ್ತಿ ತುಂಬುವ ಸಲುವಾಗಿ “ಅಹಿಂದ ಸಬಲೀಕರಣ ಸೌಹಾರ್ದ ಸಹಕಾರಿ ಬ್ಯಾಂಕ್ “ಸ್ಥಾಪಿಸಿರುತ್ತೇವೆ. ಸಂಘಟನೆ ಮತ್ತು ಬ್ಯಾಂಕನ್ನು ರಾಜ್ಯದ ಉದ್ದಗಲಕ್ಕೂ ವಿಸ್ತರಿಸುವ ಪ್ರಯತ್ನಗಳು ಪ್ರಗತಿಯಲ್ಲಿವೆ.
ದೇಶದ ಪ್ರಗತಿಗೆ, ದೇಶದ ಸಂಪತ್ತು , ಆರ್ಥಿಕ ಶಕ್ತಿ , ರಾಜಕೀಯ ಶಕ್ತಿ , ಅಧಿಕಾರದ ಶಕ್ತಿಗಳನ್ನು ದೇಶದ ಜನರಲ್ಲಿ ಸಮವಾಗಿ ಹಂಚಿಕೆ ಮಾಡಿ – ಅಸಮಾನತೆ ನಿವಾರಣೆ, ಸಮ ಸಮಾಜ ನಿರ್ಮಾಣ, ಜಾತ್ಯಾತೀತ ರಾಷ್ಟ್ರ ನಿರ್ಮಾಣ, ಅಂತಿಮವಾಗಿ ಸಮಾನತೆಯ ಭಾರತ ರಾಷ್ಟ್ರ ನಿರ್ಮಾಣಕ್ಕೆ ಈ ಸಂಘಟನೆ ಮತ್ತು ಬ್ಯಾಂಕ್ ಪ್ರಯತ್ನಿಸುತ್ತಿದೆ. ಆಸಕ್ತಿ ಮತ್ತು ಮನಸ್ಸು ಇರುವವರು ಧರ್ಮ, ಜಾತಿ, ವೈಸಮ್ಯ ಮರೆತು. ಅಹಿಂದ ಸಂಘಟನೆ ಮತ್ತು ಬ್ಯಾಂಕ್ ಅನ್ನು ರಾಜ್ಯದ ಉದ್ದಗಲಕ್ಕೂ ಕಟ್ಟಲು ಸ್ವಯಂ ಸೇವಾ ಭಾವನೆಗಳಿಂದ ದುಡಿಯಲು, ಸಮಾನತೆಯ ರಾಷ್ಟ್ರ ಕಟ್ಟಲು, ದಯಮಾಡಿ ನಮ್ಮೊಂದಿಗೆ ಕೈಜೋಡಿಸಿ. ಹೆಚ್ಚಿನ ಮಾಹಿತಿಗಾಗಿ ” ಅಹಿಂದ ” ಚಳುವಳಿ ಸಂಘಟನೆ ರಾಜ್ಯ ಮುಖ್ಯ ಸಂಚಾಲಕ ಎಸ್. ಮೂರ್ತಿ ಅವರನ್ನು ಸಂಪರ್ಕಿಸಿ.