ಬೆಂಗಳೂರು: ಸರಿಯಾದ ಫುಟ್ಪಾತ್ಗಳು ಮತ್ತು ವೈಜ್ಞಾನಿಕ ವಿನ್ಯಾಸದ ರಸ್ತೆ ಸೇರಿದಂತೆ ಸಮರ್ಪಕ ಸೌಲಭ್ಯಗಳನ್ನು ಒದಗಿಸುವಲ್ಲಿ ಆಡಳಿತ ಮಂಡಳಿ ಮತ್ತು ಬಿಲ್ಡರ್ ವಿಫಲರಾಗಿದ್ದಾರೆ ಎಂದು ಆರೋಪಿಸಿ ಬಿನ್ನಿಪೇಟೆಯ ಶಾಪೂರ್ಜಿ ಪಲ್ಲೋಂಜಿ ಪಾರ್ಕ್ವೆಸ್ಟ್ ಅಪಾರ್ಟ್ಮೆಂಟ್ನ ನಿವಾಸಿಗಳು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ಈಗಾಗಲೇ 1,000 ಕುಟುಂಬಗಳು ಸ್ಥಳಾಂತರಗೊಂಡಿರುವ 3,000 ಫ್ಲಾಟ್ಗಳನ್ನು ಹೊಂದಿರುವ ಅಪಾರ್ಟ್ಮೆಂಟ್ ಸೊಸೈಟಿಗೆ ಮೂಲ ಪಾದಚಾರಿ ಮೂಲಸೌಕರ್ಯಗಳಿಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದು ಆವರಣದೊಳಗೆ ಸಂಚರಿಸುವ ನಿವಾಸಿಗಳಿಗೆ ಫುಟ್ಪಾತ್ ಇಲ್ಲದಿರುವ ಬಗ್ಗೆ ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದ್ದಾರೆ.