ಬೆಂಗಳೂರು: ಸಿದ್ದರಾಮಯ್ಯ ಸರ್ಕಾರಕ್ಕೆ ಮಸಿ ಬಳಿಯಬೇಕು ಎಂದು ವಿಪಕ್ಷಗಳು ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಮಾಡ್ತಿದಾರೆ. ನಾವು ಬಡವರು, ಹಿಂದುಳಿದವರು, ಮಹಿಳೆ ಯರ ಪರವಾಗಿದ್ದೇವೆ. ಬಿಜೆಪಿಯವರು ಯಾ ರಿಗೆ ಏನು ಮಾಡಿದ್ದಾರೆ?. ಅವರು ಎಸ್ಸಿ, ಎಸ್ಟಿಗೆ ಏನು ಮಾಡಿದ್ದಾರೆ ಅನ್ನೋದನ್ನ ಹೇಳಲಿ ಎಂದು ಸವಾಲು ಹಾಕಿದ್ದಾರೆ.
ನಾವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಜಾತಿ ಇಲ್ಲ. ಎಲ್ಲಾ ವರ್ಗದವರಿಗೂ ಯೋಜನೆಗಳನ್ನ ಕೊಟ್ಟಿದ್ದೇವೆ ಬಿಜೆಪಿಯ ಯಾರಾದರೊಬ್ಬ ಸಚಿವ, ಶಾಸಕರನ್ನ ಬಂಧಿಸಿದ್ದಾರಾ? ಕಾನೂನು ವಿರುದ್ಧ ಯಾರು ಮಾಡಿದ್ರೂ ಅವರ ವಿರುದ್ಧ ಫೈಟ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಬಿಜೆಪಿ, ಜೆಡಿಎಸ್ ನವರು ವಾಲ್ಮೀಕಿ ನಿಗಮದ ಅಕ್ರಮದ ವಿಚಾರ ಪ್ರಸ್ತಾಪಿಸಿದ್ದಾರೆ. ಅದನ್ನ ನಿಯಮ 69ಕ್ಕೆ ಬದಲಾಯಿಸಿ ಸ್ಪೀಕರ್ ಚರ್ಚೆಗೆ ಅವಕಾಶ ನೀಡಿದ್ದಾರೆ. ಇದಕ್ಕೆ ನಾವೇನು ವಿರೋಧ ವ್ಯಕ್ತ ಪಡಿಸಲಿಲ್ಲ. ಮೂರು ಗಂಟೆಗೂ ಹೆಚ್ಚು ಹೊತ್ತು ವಿರೋಧ ಪಕ್ಷದ ನಾಯಕರು ಚರ್ಚೆ ಮಾಡಿದರು.
ಒಟ್ಟು ಏಳು ಗಂಟೆ ಹೊತ್ತು ಚರ್ಚಿಸಿದರು.ನಾವು ವಿರೋಧ ಪಕ್ಷಗಳ ಮಾತನ್ನ ಆಲಿಸಿದ್ದೇವೆ. ಒಂದೂ ಮಾತನ್ನಾಡದೆ ಆಲಿಸಿದ್ದೇವೆ. ಆದರೆ, ಅವರು ಸರ್ಕಾರದ ಮಾತುಗಳನ್ನೂ ಕೇಳಬೇಕಲ್ಲವಾ? ಬಿಜೆಪಿಯವರು ಎತ್ತಿದಂತಹ ಭ್ರಷ್ಟಾಚಾರ ವಿಚಾರವನ್ನ ನಾವೂ ಒಪ್ಪಿಕೊಂಡಿದ್ದೇವೆ. ಇದನ್ನೇನು ನಾವು ಒಪ್ಪಿಲ್ಲ ಅಂತಾ ಹೇಳೋದಿಲ್ಲ. ಆದರೆ ಯಾರು ಅಕ್ರಮ ಮಾಡಿದ್ದಾರೆ. ಇದಕ್ಕೆ ಜವಾಬ್ದಾರರು ಯಾರು? ಪರಿಶಿಷ್ಟ ಇಲಾಖೆಯ ಸಚಿವರಾಗಿದ್ದ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ.
ಈಗ ನಾನೇ ಆ ಇಲಾಖೆಗೆ ಮಂತ್ರಿಯಾಗಿದ್ದೇನೆ. ನಿಗಮ ಹಣವನ್ನ ವಸಂತನಗರದ ಯೂನಿಯನ್ ಬ್ಯಾಂಕ್ ನಲ್ಲಿಟ್ಟಿದ್ದರು. ಹಣಕಾಸು ವ್ಯವಹಾರ ನಿಭಾಯಿಸೋದು ನಿಗಮ ಎಂಡಿ ಜವಾಬ್ದಾರಿ. ಹೆಚ್ಚಿನ ಜವಾಬ್ದಾರಿ ಅವರ ಮೇಲಿರುತ್ತೆ. ಅವರು ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಅಲ್ಲಿ ಪ್ರೆಸಿಡೆಂಟ್ ಆಗಿರೋನು ಹೆಡ್ ಅಲ್ಲ. ಬಸನಗೌಡ ದದ್ದಲ್ ರನ್ನ ಅಧ್ಯಕ್ಷರನ್ನಾಗಿ ಮಾಡಿದ್ದೆವು. ನಾಗೇಂದ್ರ ಇಲಾಖೆಗೆ ಮಂತ್ರಿ ಆಗಿದ್ರು. ವಸಂತ ನಗರ ಯೂನಿಯನ್ ಬ್ಯಾಂಕ್ ನ ಮ್ಯಾನೇಜರ್ ಶೋಭನ ಅನ್ನೋರಿದ್ರು. ಆ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕ್.
ಅದು ನಮ್ಮ ಅಧೀನಕ್ಕೆ ಬರೋದಿಲ್ಲ. ವಸಂತನಗರ ಬ್ಯಾಂಕ್ ನಿಂದ ಎಂಜಿ ರೋಡ್ ಯೂನಿಯನ್ ಬ್ಯಾಂಕ್ ಗೆ ಹಣ ವರ್ಗಾವಣೆ ಮಾಡಿದ್ದಾರೆ. ಒಟ್ಟಾರೆ ಬೇರೆ ಬೇರೆ ಕಡೆ ಇದ್ದ ಒಟ್ಟು 187.33 ಕೋಟಿ ಹಣ ವರ್ಗಾವಣೆ ಆಗಿದೆ. ಚೀಫ್ ಮ್ಯಾನೇಜರ್ ಶುಚಿಸ್ಮಿತ ರಾವ್, ದೀಪಾ ಡೆಪ್ಯೂಟಿ ಮ್ಯಾನೇಜರ್, ಕೃಷ್ಣಮೂರ್ತಿ ಕ್ರೆಡಿಟ್ ಆಫೀಸರ್ ಈ ಮೂವರು ಎಂಜಿ ರೋಡ್ ಬ್ಯಾಂಕ್ ನಲ್ಲಿದ್ದ ಮುಖ್ಯಸ್ಥರು. ಅಶೋಕ್ ಇದ್ಯಾವುದನ್ನೂ ಕೇಳಿಲ್ಲ. ಯಾಕೆ ವರ್ಗಾವಣೆ ಮಾಡಿದ್ರು ಅಂತಾ ಕೇಳಬೇಕಲ್ವಾ ಎಂದು ತಿಳಿಸಿದ್ದಾರೆ.
ತೆಲಂಗಾಣದ 18 ಅಕೌಂಟ್ಗಳಿಗೆ ಹಣ ವರ್ಗಾವಣೆ ಆಗಿತ್ತು. ಅಲ್ಲಿಂದ 199 ಅಡಿಷನಲ್ ಅಕೌಂಟ್ ಗಳಿಗೆ ಹೋಗಿದೆ. ಒಟ್ಟು 213 ಅಕೌಂಟ್ ಗಳಿಗೆ ಹೋಗಿದೆ. ಬೇರೆ ರಾಜ್ಯಕ್ಕೆ ಹೋದಾದ ಪರಿಶೀಲನೆ ಮಾಡಬೇಕಿತ್ತಲ್ವಾ. ಇವರಿಗೆ ಜವಾಬ್ದಾರಿ ಇಲ್ವಾ. ಯಾಕೆ ಅಂತಾ ಆ ಅಧಿಕಾರಿಗಳನ್ನ ಕೇಳಬೇಕಿತ್ತಲ್ವಾ, ಅಶೋಕ್ ಈ ವಿಚಾರಗಳನ್ನ ಪ್ರಸ್ತಾಪ ಮಾಡಿಲ್ಲ. ಅಕೌಂಟ್ ಸೂಪರಿಂಡೆಂಟ್ ಚಂದ್ರಶೇಖರ್ ಬ್ಯಾಂಕ್ ವ್ಯವಹಾರ ನೋಡಿಕೊಳ್ತಿದ್ದ. 26-5-24ರಂದು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಳ್ತಾನೆ. ಅವರ ಹೆಂಡತಿ ಕವಿತ ಡೇಟಾ ಎಂಟ್ರಿ ಆಪರೇಟರ್ ಆಗಿದ್ರು.
ಇವ್ರು ತಮಿಳುನಾಡಿನ ಭೋವಿ ಜನಾಂಗದದವರು ಎಂದರು.ಆ ಡೆತ್ ನೋಟ್ ನ ನಾನು ಓದಿದ್ದೇನೆ. ಮಂತ್ರಿಗಳು ಮೌಖಿಕವಾಗಿ ಹೇಳಿದ್ರು ಅಂತಾ ಬರೆದಿದ್ದಾನೆ. ಅವನ ಹೆಂಡತಿ ಕವಿತ 27ರಂದು ದೂರು ಕೊಡ್ತಾರೆ.ದೂರಿನ ಮೇಲೆ ಎಫ್ಐಆರ್ ದಾಖಲಾಗುತ್ತೆ ಈ ಮೂವರ ಮೇಲೆ ಎಫ್ ಐಆರ್ ಹಾಕಿ ಕೋರ್ಟ್ ಗೆ ಹಾಕ್ತಾರೆ ಎಂದರು.28ರಂದು ಬ್ಯಾಂಕ್ ಅಧಿಕಾರಿಗಳ ವಿರುದ್ದ ದೂರು ಕೊಡ್ತಾರೆ ಎಂದಿರುವ ಮುಖ್ಯಮಂತ್ರಿ ಹಗರಣಕ್ಕೆ ಸಂಬಂಧಪಟ್ಟಂತೆ ವಿವರ ನೀಡಿದ್ದಾರೆ.