ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಇಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ತಾವು ರಾಜ್ಯ ಸರ್ಕಾರದ ವಿರುದ್ಧ ಮಾಡಿದ ತೀವ್ರ ವಾಗ್ದಾಳಿಗೆ ಸರ್ಕಾರಕ್ಕೆ ಮುಜುಗರ ಉಂಟಾದ ಪರಿಣಾಮ ಈ ರೀತಿಯ ಕ್ರಮ ಅನುಸರಿಸಲಾಗುತ್ತಿದೆ ಎಂದಿದ್ದಾರೆ.
ಈ ರಾಜ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದ ದಿನದಿಂದಲೇ ವರ್ಗಾವಣೆ ದಂಧೆಯಲ್ಲಿ ನಿರತರಾಗಿ ದೊಡ್ಡ ಮಟ್ಟದ ಅಕ್ರಮಗಳನ್ನು ನಡೆಸುತ್ತಲೇ ಬಂದರು.
ಆಡಳಿತ ಪಕ್ಷದವರೇ ಸ್ವಯಂಕೃತ ಅಪರಾಧಗಳನ್ನು ಮಾಡಿಕೊಂಡು ಬಂದಿದ್ದಾರೆ. ಇದಕ್ಕಾಗಿ ನಾನು ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ವಾಗ್ದಾಳಿ ಮಾಡಿದ್ದೆ ಅದಕ್ಕಾಗಿ ಈ ಕ್ರಮ ಜರುಗಿಸಿದ್ದಾರೆ.
ಇದಕ್ಕೆಲ್ಲಾ ನಾನು ಹೆದರುವುದಿಲ್ಲ. ನಾನು ಸಿಎಂ ಆಗಿದ್ದಾಗ ನನಗೆ ಬೆಂಬಲ ಸೂಚಿಸಿದ್ದ ಶಾಸಕರೋರ್ವರು 150 ಕೋಟಿ ಸಂಗ್ರಹಣೆ ಬಗ್ಗೆ ಆರೋಪ ಮಾಡಿದ್ದರು. ಅದರ ವಿರುದ್ಧ ಆಗಿನ ವಿಪಕ್ಷವಾಗಿದ್ದ ಕಾಂಗ್ರೆಸ್ನವರು ನನ್ನ ವಿರುದ್ಧ ಹೋರಾಟ ಮಾಡಲು ಮುಂದಾದಾಗ ವಿಧಾನಸಭೆಯಲ್ಲಿ ಚರ್ಚೆ ಮಾಡಿ ನಾನು ಯಾವ ಶಾಸಕರ ಬೆಂಬಲವೂ ಇಲ್ಲದೆ ಹೋರಾಟ ಮಾಡುತ್ತೇನೆ ಎಂದಿದ್ದೆ ತಮ್ಮ ಮೇಲಿರುವ ಆರೋಪಕ್ಕೆ ಸಂಬಂಧಪಟ್ಟಂತೆ ವಿವರಿಸಿ, ತಮಗೆ ಮುಖ್ಯಮಂತ್ರಿಯವರ ಮನೆಯಿಂದಲೇ ಎಲ್ಲಾ ಮಾಹಿತಿ ದೊರೆಯುತ್ತದೆ. ಕೆಲ ದಾಖಲೆಗಳು ಸರ್ಕಾರದ ಬಳಿ ಇದೆಯೋ ಇಲ್ಲವೋ ಗೊತ್ತಿಲ್ಲ. ನನ್ನ ಬಳಿಯಿವೆ.
ಇವನ್ನು ನಾನು ಇಟ್ಟುಕೊಂಡಿದ್ದೇನೆ. ಸರ್ಕಾರ ಇದೆ ಎಂದು ನನ್ನನ್ನು ಹೆದರಿಸುತ್ತೀರಾ? ಪೊನ್ನಣ್ಣ ಅವರೇ ನೀವೊಬ್ಬರೇ ಕಾನೂನು ತಜ್ಞರಿರುವುದಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಪೊನಣ್ಣ ವಿರುದ್ಧ ಕುಮಾರಸ್ವಾಮಿ ಗುಡುಗಿದ್ದಾರೆ.