ಬೆಂಗಳೂರು: ವೈಕುಂಠ ಏಕಾದಶಿಯ ನಿಮಿತ್ತ ನಗರದ ದೇವಸ್ಥಾನವೊಂದರಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ನಿನ್ನೆ ಎಸ್ ಟಿ ಸೋಮಶೇಖರ್ ಮಾಡಿದ ಅರೋಪಗಳಿಗೆ ಉತ್ತರ ನೀಡಿದರು. ಚುನಾವಣೆಯ ಸಂದರ್ಭದಲ್ಲಿ ತಮಗೆ ಬೇಕಿರುವ ಜನ ಬಂದು ಚುನಾವಣಾ ಖರ್ಚಿಗೆ ದುಡ್ಡು ನೀಡುತ್ತಾರೆ, ಹಾಗೆ ಕೊಟ್ಟವರ ದುಡ್ಡನ್ನು ಚುನಾವಣೆಯಲ್ಲಿ ಖರ್ಚು ಮಾಡಿದ್ದೇನೆ, ತಾನು ಸತ್ಯ ಹರಿಶ್ಚಂದ್ರ ಅಂತ ಯಾವತ್ತೂ ಹೇಳಿಕೊಂಡಿಲ್ಲ, ಹಾಗಂತ ಈ ಸರ್ಕಾರದ ಹಾಗೆ ತನ್ನ ಸಹಿಯನ್ನು ಮಾರಾಟಕ್ಕಿಟ್ಟಿಲ್ಲ, ಈ ಸರ್ಕಾರ ಎಲ್ಲಾದಕ್ಕೂ ದರ ನಿಗದಿ ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದರು.