ದೇವನಹಳ್ಳಿ : ಸರ್ಕಾರಿ ನೌಕರರು ಹುದ್ದೆಯ ಜೊತೆಗೆ ತಮ್ಮ ಆರೋಗ್ಯದ ಕಡೆ ಗಮನ ಕೊಟ್ಟು ಹಿತಮಿತವಾದ ವ್ಯಾಯಾಮ ಆರೋಗ್ಯದ ನಡಿಗೆಯ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸರ್ಕಾರಿ ನೌಕರರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ಶಿವಶಂಕರ್ ಸಲಹೆ ನೀಡಿದರು.
ದೇವನಹಳ್ಳಿ ತಾಲೂಕಿನ ಚಪ್ಪರದಕಲ್ಲು ಜಿಲ್ಲಾಧಿಕಾರಿಗಳ ಭವನದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಂದಾಯ ಇಲಾಖೆ, ಗ್ರಾಮ ಆಡಳಿತ ಅಧಿಕಾರಿಗಳ ಸಂಘ,ಕಂದಾಯ ಇಲಾಖಾ ನೌಕರರು, ಗ್ರಾಮಸಹಾಯಕರ ಸಂಘದ ಸಂಯುಕ್ತಾಶ್ರಯದಲ್ಲಿ “2024ನೇ ಸಾಲಿನ ಕಂದಾಯ ದಿನಾಚರಣೆಯ ಅಂಗವಾಗಿ ಕಂದಾಯ ಕಾರ್ಯಗಾರ”ದಲ್ಲಿ ಮಾತನಾಡಿದರು.
ಕಂದಾಯ ಇಲಾಖೆಗೆ ಸಂಬಂಧಪಡುವ ಗ್ರಾಮ ಆಡಳಿತಾಧಿಕಾರಿಗಳು, ಲೆಕ್ಕ ಸಹಾಯಕರು ತಾಂತ್ರಿಕವಾಗಿ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಅದನ್ನು ಗಮನ ಹರಿಸಿ ಪರಿಹರಿಸಲಾಗುವುದು ಇಲಾಖೆಯ ಯಾವುದೇ ಪ್ರಕ್ರಿಯೆಗಳು ನಿಗದಿತ ಸಮಯದಲ್ಲಿ ಮುಗಿಸಿ ಇಲ್ಲವಾದಲ್ಲಿ ರಾಜ್ಯದ ಕಂದಾಯ ಇಲಾಖೆಯ ರಾಂಕಿಂಗ್ ನಲ್ಲಿ ಹಿಂದುಳಿಯುವುದು ಬೇಡ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರು ಎದುರಿಸುತ್ತಿರುವ ಆರೋಗ್ಯದ ಸಮಸ್ಯೆ, ನೌಕರಿಯಲ್ಲಿ ಬಡ್ತಿ, ವರ್ಗಾವಣೆ ಮುಂತಾದ ವಿಷಯಗಳ ಬಗ್ಗೆ ಕುಲಂಕುಶವಾಗಿ ಚರ್ಚಿಸಿ ಪರಿಶೀಲಿಸಿ ಶೀಘ್ರವೇ ಪ್ರತಿಕ್ರಿಯಿಸಲಾಗುವುದು ಹಾಗೂ ಸಾರ್ವಜನಿಕ ಸೇವೆಯಲ್ಲಿ ಇರುವಂತಹ ನಮ್ಮಂತಹ ನೌಕರರು ನಮ್ಮ ಕುಟುಂಬಕ್ಕೂ ಸಹ ಸಮಯ ನೀಡಬೇಕು ನಮ್ಮ ಕಡೆ ನಾವೇ ಗಮನ ಕೊಡಬೇಕು ಆಗ ಮಾತ್ರ ಸಾರ್ವಜನಿಕ ಸೇವೆ ಮಾಡುವುದರಲ್ಲಿ ಉತ್ಸಾಹವಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಅಮರೇಶ್, ವಿಶೇಷ ತಹಸೀಲ್ದಾರ್ ರಾಜೀವ್ ಸುಲೋಚನ, ದೊಡ್ಡಬಳ್ಳಾಪುರ ಉಪವಿಭಾಧಿಕಾರಿ ಶ್ರೀನಿವಾಸ್,ಆರ್ ಎಚ್ ಐ ಗಂಗಾಧರ್, ಹೊಸಕೋಟೆ ತಹಸೀಲ್ದಾರ್ ವಿಜಯ್ ಕುಮಾರ್, ಮೂರು ತಾಲೂಕಿನ ತಹಸೀಲ್ದಾರ್, ಕರ್ನಾಟಕ ರಾಜ್ಯ ಕಂದಾಯಗ್ರಾಮ ಆಡಳಿತ ಅಧಿಕಾರಿಗಳ ಸಂಘ ಜಿಲ್ಲಾಧ್ಯಕ್ಷ ರಘುಪತಿ.ಬಿ.ಸಿ,ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುದೀಪ್ .ಡಿ,ಗ್ರಾಮ ಸಹಾಯಕರ ಸಂಘದ ಜಿಲ್ಲಾಧ್ಯಕ್ಷ ವೆಂಟೇಶ್.ಎಂ,ಡಿಟಿ ಚೈತ್ರಾ ಸೇರಿದಂತೆ ಇಲಾಖೆಯ ನೌಕರರು, ಗ್ರಾಮ ಸಹಾಯಕರು, ಲೆಕ್ಕಾಧಿಕಾರಿ ಭಾಗವಿಹಿಸಿದ್ದರು.