ದೇವನಹಳ್ಳಿ: ಪಟ್ಟಣದ ಜಿಲ್ಲಾ ಸರ್ಕಾರಿನೌಕರರ ಸಂಘದ ಕಚೇರಿಯಲ್ಲಿ ಚುನಾವಣಾಧಿಕಾರಿ ರಾಜು ಸಬಾಸ್ಟಿಯನ್ ಅವರಿಗೆ ಬೆಂಗಳೂರು ಗ್ರಾಮಾ
ಂತರ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಕಾರಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ದಿಲೀಪ್ ಕುಮಾರ್ ನಾಮಪತ್ರ ಸಲ್ಲಿಸಿದರು.
ಈ ವೇಳೆಯಲ್ಲಿ ಮಾತನಾಡಿ ಎಲ್ಲರ ಸಹಕಾರ ಮತ್ತು ಒಮ್ಮತದಿಂದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ ಹಾಗಾಗಿ
ನಮ್ಮ ತಂಡದಿಂದ ನನ್ನ ಜೊತೆ ರಾಜ್ಯಪರಿಷತ್ ಸದಸ್ಯರಾಗಿ, ಖಜಾಂಚಿಯಾಗಿ ನಾಮಪತ್ರವನ್ನು ಇಂದು ಮತ್ತು ನಾಳೆ ಸಲ್ಲಿಸಲಿದ್ದಾರೆ,ಎಲ್ಲಾ ಇಲಾಖೆಯ ನೌಕರರ ಸಹಕಾರ ಸಹಮತ ಹೀಗೆ ಮುಂದುವರೆಯಲಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ನಗರಕ್ಕೆ ಹೊಂದಿಕೊಂಡಿರುವ ಕಾರಣ ಎಚ್ ಆರ್ ಐ ಮತ್ತು ಸಿ ಸಿ ಗ್ರಾಮಾಂತರ ಜಿಲ್ಲೆಗೂ ವಿಸ್ತರಿಸಬೇಕು,
ಓಪಿಎಸ್ ಮರುಸ್ಥಾಪನೆ,ಆರೋಗ್ಯ ಸಂಜೀವಿನಿ ಯೋಜನೆಗಳನ್ನು ಜಾರಿಗೆ ತರುವಂತೆ ಒತ್ತಾಯಿಸಲಾಗುವುದು ಪ್ರಮುಖ ಮೂರು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂಘದ ಅಭಿವೃದ್ಧಿಯನ್ನು ಮುಂದುವರಿಸಲಾಗುವುದು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀನಾಥ್ ಗೌಡ, ಪಿಡಿಓಗಳಾದ ಗಂಗರಾಜು, ಶ್ರೀನಿವಾಸ್, ಸಿದ್ದರಾಜು, ಶ್ರೀಧರ್ ಸೇರಿದಂತೆ ಹಲವಾರು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.