ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕನನ್ನಾಗಿ ಅವಿರೋಧ ನಾಲ್ಕನೇ ಬಾರಿಗೆ ಅವಿರೋಧ ಆಯ್ಕೆ ಮಾಡಿದ ತಾಲ್ಲೂಕಿನ ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಶಿಕ್ಷಕರು,ನೌಕರರ ಕ್ಷೇಮಾಭಿವೃದ್ದಿಗೆ ಶ್ರಮಿಸುವ ಭರವಸೆಯೊಂದಿಗೆ ಈ ಅವಕಾಶ ಕಲ್ಪಿಸಿಕೊಟ್ಟ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ನೌಕರರ ಸಂಘದ ನೂತನ ನಿರ್ದೇಶಕ ರತ್ನಪ್ಪ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ಸಿಬ್ಬಂದಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸತತವಾಗಿ ಪುನ
ರಾಯ್ಕೆ ಮಾಡುವ ಮೂಲಕ ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವ ಭರವಸೆ ನೀಡಿದ ಅವರು, ಪದವಿ ಪೂರ್ವ ಉಪನ್ಯಾಸಕರು, ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಕೈಲಾದಷ್ಟು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು, ನೌಕರರಿಗೆ ವೇತನ ಆಯೋಗದ ವರದಿ ಜಾರಿಗೆ ಶ್ರಮಿಸಿದ್ದಾರೆ, ನೌಕರರ ಅನೇಕ ಸಮಸ್ಯೆಗಳ ಪರಿಹಾರಕ್ಕೂ ಸ್ಪಂದಿಸಿ ಕೆಲಸ ಮಾಡಿದ್ದು, ಅವರ ಮಾರ್ಗದರ್ಶನದಲ್ಲಿ ತಾವೂ ಅವರಂತೆ ನೌಕರ ಸ್ನೇಹಿಯಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪರುಶುರಾಮ ಉನ್ಕಿ, ಉಪನ್ಯಾಸಕರಾದ ನರಸಾಪುರ ಮಂಜುನಾಥ್, ಬಿ.ಶ್ರೀನಿವಾಸ್, ಸುಂದರ್, ಶ್ರೀನಾಥ್, ಆನಂದ್, ಅನುರಾಧ, ಮಂಜುಳಾ, ಸವಿತಾ, ರುಕ್ಮಿಣಿ, ಲತಾ, ಉಪಪ್ರಾಂಶುಪಾಲೆ ರಾಧಮ್ಮ ಶಿಕ್ಷಕ ಮುಕುಂದ ಮತ್ತು ಸಿಬ್ಬಂದಿ ಹಾಜರಿದ್ದರು.