ಆನೇಕಲ್ : ಸರ್ಜಾಪುರದ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಐದು ವಷಗಳ ಅವದಿಯ ಆಡಳಿತ ಮಂಡಳಿಯ ನಿರ್ದೆಶಕರ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆದಿದ್ದು ಅದರಲ್ಲಿ ಈಗಾಗಲೇ 10 ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದು ಇನ್ನು ಉಳಿದ 2 ಸ್ಥಾನಕ್ಕೆ ಫೆಬ್ರವರಿ 9 ರಂದು ಚುನಾವಣೆ ನಡೆದಿದ್ದು. ಇಂದು 2 ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರ ಬಂದಿದೆ.
ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಗುರುಸ್ವಾಮಿ. ಸಿ 71 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ಎಸ್.ವಿ ಶ್ವೇತ ರಾಘವೇಂದ್ರ 687 ಮತಗಳನ್ನು ಪಡೆದು ವಿಜೇತರಾದರು ಹಾಗೆಯೇ ಹಿಂದುಳಿದ ಪ್ರವರ್ಗ ಎ ಮೀಸಲು ಸ್ಥಾನಕ್ಕೆ ರಮೇಶ್ ಎಂ.ಜಿ 85 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ವೆಂಕಟೇಶ್ 675 ಮತಗಳನ್ನು ಪಡೆದು ವಿಜೇತರಾದರು.
ನಂದಕುಮಾರ್ ಕೆ, ಟಿ.ಪಿಲ್ಲರೆಡ್ಡಿ, ಬ್ರಮರೇಶ್ ಬಿ.ಆರ್, ವಿಶ್ವನಾಥ್ ಕೆ, ಸುಬ್ಬಾರೆಡ್ಡಿ, ಹರೀಶ್ ಬಾಬು ವೈ, ಸಾಮಾನ್ಯ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದರೂ.
ಪರಿಶಿಷ್ಟ ಪಂಗಡದಿಂದ ಪವನ್ ಕುಮಾರ್, ಹಿಂದುಳಿದ ಪ್ರವರ್ಗ ಬಿ ಸತೀಶ್ ಕುಮಾರ್ ಟಿ.ಸಿ, ಮಹಿಳಾ ಮೀಸಲು ಸ್ಥಾನದಿಂದ ಸುಧಾ ಜಿ ಮತ್ತು ಆಶಾ ಕಿರಣ್ ಅವಿರೋಧವಾಗಿ ವಿಜಯಶಾಲಿಗಳಾಗಿದ್ದಾರೆ. ಒಟ್ಟು 12ಮಂದಿ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.ಬಿಜೆಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಮಾತನಾಡಿ, ಮಾತನಾಡಿ, ಸಹಕಾರ ಸಂಘಗಳಲ್ಲಿ ಆನೇಕಲ್ ತಾಲ್ಲೂಕಿನಲ್ಲಿ ಬಿಜೆಪಿ ಪಕ್ಷವು ಬಲಿಷ್ಟವಾಗಿದೆ ಎಂಬುದಕ್ಕೆ ಇಂದು ನಡೆದ ಚುನಾವಣೆಯೇ ಸಾಕ್ಷಿಯಾಗಿದೆ. ತಾಲೂಕಿನಾದ್ಯಂತ ನಡೆಯುತ್ತಿರುವ ಸಹಕಾರ ಸಂಘಗಳ ಚುನಾವಣೆಯ ಫಲಿತಾಂಶ ಮುಂದೆ ನಡೆಯಲಿರುವ ಎಲ್ಲಾ ಚುನಾವಣೆಗೂ ದಿಕ್ಸೂಚಿಯಂತಿದೆ.
ಮುಂದಿನ ದಿನಗಳಲ್ಲಿ ಈ ಸಂಘವು ಉತ್ತಮ ಆಡಳಿತಾತ್ಮಕ ಕಾರ್ಯಗಳನ್ನು ಕೈಗೊಂಡು ರಾಜ್ಯದಲ್ಲಿಯೇ ಮಾದರಿ ಸಂಘವಾಗಿ ಬದಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಅಭ್ಯರ್ಥಿಗಳ ಜಯಕ್ಕೆ ಬೆಂಬಲವನ್ನು ನೀಡಿದ ರೈತಪಿ ಕುಟುಂಬ ವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಇನ್ನು ಇದೇ ಸಂದರ್ಭದಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ ಎಸ್.ವಿ.ಶ್ವೇತ ರಾಘವೇಂದ್ರ ಮತ್ತು ವೆಂಕಟೇಶ್ ರವರಿಗೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಸಿಹಿ ಹಂಚಿ ಶುಭ ಕೋರಿದರು.
ಬಿಜೆಪಿ ಮುಖಂಡರಾದ ಕೆ.ವಿ.ಶಿವಪ್ಪ, ಬುಲೆಟ್ ಬಾಬು, ಮುರಳಿಕೃಷ್ಣ, ಎಸ್.ಆರ್ ಗೋಪಾಲ್ ರೆಡ್ಡಿ, ಕೆ.ಸಿ ಜಯಪ್ರಕಾಶ್, ಪಂಡಿತನ ಅಗ್ರಹಾರ ಅಶೋಕ್, ಕೆ.ವಿ.ಕೇಶವರೆಡ್ಡಿ, ವಿ.ಶ್ರೀನಿವಾಸ್, ಶಿವಶಂಕರ್, ರಂಜೇಶ್, ಅನಿಲ್ ರೆಡ್ಡಿ ಹಾಗೂ ಮತ್ತಿತ್ತರರು ಹಾಜರಿದ್ದರು.