ಬೆಂಗಳೂರು: ಕರ್ನಾಟಕ ರಾಜ್ಯ ಕೋ ಆಪರೇಟಿವ್ ಸೊಸೈಟಿಯಲ್ಲಿ ಹಣ ದುರುಪಯೋಗ ಆರೋಪಕ್ಕೆ ಸಂಬಂಧಪಟ್ಟಂತೆ ಸೊಸೈಟಿಯ ಪ್ರಭಾರಿ ಸಿಇಓ ಸೇರಿ 6 ಮಂದಿ ನಾಪತ್ತೆಯಾಗಿದ್ದಾರೆ.ಪ್ರಕರಣ ದಾಖಲಾಗುತ್ತಿದ್ದಂತೆ ಮೊಬೈಲ್ ಸ್ಚಿಚ್ ಆಪ್ ಮಾಡಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.ನಂದಿನಿ ಲೇಔಟ್ ಠಾಣೆ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಪ್ರಭಾರ ಸಿಇಓ ಆಶಾಲತಾ, ಆಕೆಯ ಪತಿ ಸೋಮಶೇಖರ್, ಃಆಅಅ, ಅಪೆಕ್ಸ್ ಬ್ಯಾಂಕ್ ಮ್ಯಾನೇಜರ್ ಮತ್ತು ಆಡಿಟರ್ ಸೇರಿ 6 ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.ಐಷಾರಾಮಿ ಜೀವನ ನಡೆಸಲು ಹಣ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ಪ್ರಕರಣವನ್ನು ಸಿಐಡಿ ತನಿಖೆಗೆ ಕೋರಿ ಡಿಸಿಪಿಗೆ ಪತ್ರ ಬರೆದಿದ್ದರು.
ಕೋಟ್ಯಂತರ ರೂಪಾಯಿ ಹಣ ಬಳಕೆ ಹಿನ್ನಲೆ ಸಿಐಡಿಗೆ ಕೊಡುವಂತೆ ಕೋರಿ ಕಮಿಷನರ್ ಗೆ ಮನವಿ ಮಾಡಲಾಗಿದ್ದು, ಬಹುತೇಕ ಇನ್ನೆರಡು ದಿನದಲ್ಲಿ ಪ್ರಕರಣ ಸಿಐಡಿಗೆ ವರ್ಗಾವಣೆ ಸಾಧ್ಯತೆಯಿದೆ.2017ರಿಂದ 2023ರವರೆಗೆ 19.34 ಕೋಟಿ ರೂ. ದುರುಪಯೋಗ ಆರೋಪ ಇದಾಗಿದ್ದು, ಸೊಸೈಟಿಯಲ್ಲಿ ಠೇವಣಿ ರೂಪದಲ್ಲಿದ್ದ 19.34 ಕೋಟಿ ರೂ. ಹಣ ಅಕ್ರಮ ವರ್ಗಾವಣೆ ಆರೋಪ ಕೇಳಿ ಬಂದಿದೆ. ಆಶಾಲತಾ ಪತಿ ಸೋಮಶೇಖರ್ ಸೇರಿ ಖಾಸಗಿ ವ್ಯಕ್ತಿಗಳ ಖಾತೆಗೆ ಹಣ ವರ್ಗಾವಣೆ ಆರೋಪ ಮಾಡಲಾಗಿದೆ.
ನಂತರ 101 ಎಫ್ ಡಿ ಖಾತೆಗಳ ನಕಲಿ ಠೇವಣಿ ಬಾಂಡ್ ಗಳ ಸೃಷ್ಟಿಸಿ, ಅಕ್ರಮ ಹಣ ವರ್ಗಾವಣೆಯ ಮುಚ್ಚಿಡಲು ನಕಲಿ ಖಾತೆಗಳನ್ನ ಸೃಷ್ಟಿ ಮಾಡಲಾಗಿದೆ. ಅಪೆಕ್ಸ್ ಬ್ಯಾಂಕ್ ಕೆಲವರು ಆಶಾಲತಾ ಜೊತೆ ಶಾಮೀಲು ಆರೋಪವು ಸಹ ಇದ್ದು, ಅಧ್ಯಕ್ಷರ ಸಹಿಯನ್ನೂ ಕೂಡ ನಕಲಿ ಮಾಡಿದ್ದಾರೆ ಎನ್ನಲಾಗಿದೆ. ಸಹಕಾರ ಸಚಿವ ರಾಜಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆದಾಗ ಸೊಸೈಟಿ ಹಣವನ್ನು ಅಪೆಕ್ಸ್ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವುದಾಗಿ ಆಶಾಲತಾ ಹೇಳಿದ್ದು, ಆದರೆ ಪರಿಶೀಲನೆ ವೇಳೆ ಹಣ ವರ್ಗಾವಣೆ, ನಕಲಿ ಠೇವಣಿ ಬಾಂಡ್ ಗಳ ಸೃಷ್ಟಿ ಬೆಳಕಿಗೆ ಬಂದಿದೆ.