ತುಮಕೂರು: ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲೆಯ ಸುದ್ದಿ ಮನೆಯಲ್ಲಿ ಪತ್ರಕರ್ತರಾಗಿ ಅತ್ಯುತ್ತಮವಾಗಿ ವರದಿ ನೀಡಿ ಹೊರಹೊಮ್ಮಿದ ನಿವೃತ್ತ ಪತ್ರಕರ್ತರಿಗೆ ಸನ್ಮಾನ ಮಾಡುವ ಮೂಲಕ ಜುಲೈ ಒಂದರ ಪತ್ರಿಕಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ಶಾಸಕ ಜೆ.ಬಿ.ಜ್ಯೋತಿಗಣೇಶ್ ಮಾತನಾಡಿ 80ರ ದಶಕದಿಂದಲೂ ಪತ್ರಿಕೆ ಗಮನಿಸಿದ್ದೇವೆ ಇಂದು ಡಿಜಿಟಲ್ ಮಾಧ್ಯಮವರೆಗೆ ಪತ್ರಿಕೋದ್ಯಮ ವ್ಯಾಪಕವಾಗಿ ಬೆಳೆದು ಬಂದಿದೆ ಪತ್ರಿಕಾ ವಿತರಕರಿಂದ ಪತ್ರಿಕೆಗಳು ಜೀವಂತವಾಗಿದ್ದು ಸಂಪ್ರದಾಯಿಕ ಪತ್ರಿಕೋದ್ಯಮ ಕಣ್ಮರೆಯಾಗುತ್ತಿದೆ, ಅಂದಿನ ಮಾಧ್ಯಮ ಬರವಣಿಗೆ ಸರ್ಕಾರಗಳನ್ನೆ ಉರುಳಿಸಿದೆ, ಅಷ್ಟರ ಮಟ್ಟಿಗೆ ಪತ್ರಿಕೆಗಳು ಸದ್ದು ಮಾಡಿವೆ ಆದರೆ ಇಂದಿನ ಆಧುನಿಕ ಡಿಜಿಟಲ್ ಮಾಧ್ಯಮಗಳು ಬದಲಾವಣೆ ಕಾಣಬೇಕಿದೆ ಇಂತಹ ಮಾಧ್ಯಮವನ್ನ ರಾಜಕಾರಣಿಗಳು ಬಳಸಿಕೊಳ್ಳುತ್ತಿದ್ದಾರೆ ಎಂದರು.
ಪತ್ರಕರ್ತರು ಸಮಾಜದ ಕಾವಲು ನಾಯಿಯಾಗಿದ್ದು ವಸ್ತು ನಿಷ್ಠ ಸಮಾಜಿಕ ಕಳಕಳಿಯ ಸುದ್ದಿ ಮಾಡಬೇಕಿದೆ ಪತ್ರಕರ್ತರು ತಮ್ಮ ಘನತೆ ಗೌರವಗಳನ್ನು ಕಾಪಾಡಬೇಕಿದೆ ಪತ್ರಿಕಾರಂಗದ ಅನೇಕ ಮೇದವಿಗಳ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೆಕಿದೆ ಎಂದರಲ್ಲದೆ ಸಂಘದ ವತಿಯಿಂದ ದಿನಾಚರಣೆಯ ಪ್ರಯುಕ್ತ ಸುದ್ದಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಹಿರಿಯರಿಗೆ ಗೌರವ ನೀಡುತ್ತಿರುವುದು ಶ್ಲಾಘನೀಯವಾಗಿದೆ ಅನೇಕ ಹೋಗಬೇಕಿದೆ ಎಂದರು.
ಹಿರಿಯರಂಗ ಕರ್ಮಿ ಡಾ.ಲಕ್ಷಣದಾಸ್ ಮಾತನಾಡಿ ಪತ್ರಿಕಾ ದಿನಾಚರಣೆಯಲ್ಲಿ ಭಾಗವಹಿಸಿರುವುದು ನನ್ನ ಪುಣ್ಯ, ಅನೇಕ ಪತ್ರಕರ್ತರು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿ ಮೇಲೆ ಬಂದಿದ್ದಾರೆ ಅದೇ ರೀತಿಯಾಗಿ ತಮ್ಮ ಬರಹಗಳಿಂದ ಪತ್ರಕರ್ತರು ಬಡ ಕಲಾವಿದರನ್ನು ಕಾಪಾಡಿದ್ದಾರೆ ಈಗಿನ ಪತ್ರಕರ್ತರು ಹಿರಿಯ ಆದರ್ಶಗಳನ್ನು ಪಾಲಿಸಬೇಕು, ಇಂದ್ರ ಕುಮಾರ್ ಅಂತವರು ಪತ್ರಿಕೋದ್ಯಮ ಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಿದ್ದಾರೆ ಜಿಲ್ಲೆಯಲ್ಲಿ ಅನೇಕ ಸೃಜನಶೀಲ, ವಸ್ತು ನಿಷ್ಠ ಪತ್ರಕರ್ತರು ಇದ್ದಾರೆ ಇದರಿಂದಾಗಿ ಉದ್ಯಮ ಉಳಿದಿದೆ ಎಂದರು.
ಆಗ್ನೇಯ ಪದವೀಧರರ ಶಿಕ್ಷಕರ ಕ್ಷೇತ್ರದ. ಶಾಸಕ ಚಿದಾನಂದ ಎಂ ಗೌಡ ಮಾತನಾಡಿ ಆಧುನಿಕ ಕಾಲಘಟ್ಟದ ಪತ್ರಿಕೋದ್ಯಮದಿಂದಾಗಿ ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆನಿಸಿರುವ ಪತ್ರಿಕಾ ರಂಗ ತನ್ನ ಮೌಲ್ಯವನ್ನು ಕಳೆದುಕೊಳತ್ತಿದೆ ಯೂಟ್ಯೂಬ್, ವೆಬ್ ನ್ಯೂಸ್ ಸೇರಿದಂತೆ ಅನೇಕ ರೀತಿಯ ಜಾಗತಿಕ ಡಿಜಿಟಲ್ ಮಾಧ್ಯಮಗಳಿಂದಾಗಿ ಹಾದಿ ತಪ್ಪಿದ ಪತ್ರಿಕೋದ್ಯಮ ಅತಂತ್ರ ಸ್ಥಿತಿಯಲ್ಲಿದೆ,
ಕೆಲ ಪತ್ರಕರ್ತರು ಬೇರೆ ಬೇರೆ ವಿಚಾರಕ್ಕೆ ಕೆಟ್ಟ ಹಾದಿ ಹಿಡಿದಿದ್ದಾರೆ ಅದನ್ನ ಬಿಡಬೇಕು ವಸ್ತು ಪರಾಮರ್ಶೆಯ ಸುದ್ದಿಗಳನ್ನು ನೀಡಬೇಕು, ಪತ್ರಕರ್ತರು ಇವರೆಗೂ ಸ್ವಾವಲಂಬಿಗಳಾಗಿಲ್ಲ, ಸರ್ಕಾರದ ಹಂತದಲ್ಲಿ ಪತ್ರಕರ್ತರ ವಿಚಾರಗಳು ಚರ್ಚೆಯಾಗಿ ಸರ್ಕಾರದಿಂದ ಆರೋಗ್ಯ, ಗೌರವ ಧನ, ವಸತಿ ಸೌಲಭ್ಯ ಕಲ್ಪಸಬೇಕಾಗಿದೆ ಇದರ ವಿಚಾರವಾಗಿ ಸದನದಲ್ಲಿ ಪತ್ರಕರ್ತರ ಭವಣೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ,ಎಂಬತ್ತು- ತೊಂಬತ್ತರ ದಶಕದಲ್ಲಿ ಲೈಬ್ರರಿಗಳಲ್ಲಿ ಪತ್ರಿಕೆಗಳನ್ನು ನೋಡಿ ಓದಿ ಬೆಳೆದು ಬಂದಿದ್ದೇವೆ ಟಿ.ವಿ. ಚಾನೆಲ್ ಗಳಿಗಿಂತ ಪತ್ರಿಕೆ ವಿಭಿವಾಗಿದೆ ಇನ್ನೂ ಐವತ್ತು ವರ್ಷಗಳ ಕಾಲ ಪತ್ರಿಕೆ ಜೀವಂತವಾಗಿರುತ್ತವೆ ಅಲ್ಲಿಯವರೆಗೂ ಪತ್ರಕರ್ತರು ವಸ್ತುನಿಷ್ಠ, ಸಾಮಾಜಿಕ ಕಳಕಳಿಯಂತಹ ಸುದ್ದಿಗಳನ್ನು ನೀಡಬೇಕು ಇದ್ದರಿಂದ ಸಮಾಜ ಸರಿದೂಗಿಸುವ ಕೆಲಸವಾಗ ಬೇಕಿದೆ ಎಂದರು.
ಕಾರ್ಯ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಚೀ.ನಿ.ಪುರುಷೋತ್ತಮ್ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಿಕಾ ದಿನಾಚರಣೆ ಎಲ್ಲಡೇ ಆಚರಿಸಲಾಗುತ್ತದೆ ಸುದ್ದಿ ಮನೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ಹಿರಿಯರಿಗೆ ಗೌರಿಸುವ ಮೂಲಕ ಈ ಭಾರಿಯ ಪತ್ರಿಕಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ.
ಕನ್ನಡ ಪತ್ರಿಕೋದ್ಯಮದಲ್ಲಿ ಅನೇಕ ಬೆಳವಣಿಗೆಗಳು ಹಾಗುತ್ತಿದೆ ಇತಿಹಾಸ ಪುರಾಣ ದೇವತೆಗಳು ಕೂಡಾ ಪತ್ರಿಕೋದ್ಯಮದ ಸಂವಹನ ವ್ಯವಸ್ಥೆ ಯನ್ನ ಅಳವಡಿಸಿಕೊಂಡಿದ್ದರು, ಅಚ್ಚು ಮಳೆ ಜೊಡಿಸಿ ಮುದ್ರಿಸಿದ ಕಾಲದಿಂದಲೂ ಈಗೀನ ಜಾಗತಿಕವಾಗಿ ಬೆಳೆದ ಡಿಜಿಟಲ್ ಮಾಧ್ಯಮದವರೆಗೆ ಪತ್ರಿಕೋದ್ಯಮ ಅನೇಕ ಬದಲಾವಣೆ ಕಂಡಿದೆ ಇಂದಿನ ಪತ್ರಕರ್ತರು ಪತ್ರಿಕೋದ್ಯಮ ನಿಲವು ಬದ್ಧತೆ ಕಾಪಾಡಬೇಕಿದೆ, ನಕಲಿ ಪತ್ರಕರ್ತರ ಹಾವಳಿಗೆ ಕಡಿವಾಣ ಹಾಕಬೇಕಿದೆ,
ನಮ್ಮ ಅಸ್ತ್ರವಾದ ಪೇನ್ನು , ಪೇಪರ್ ಕ್ಯಾಮೆರಾ ಗಳ ಮೂಲಕ ನಾವು ಭ್ರಷ್ಟರಿಗೆ ಉತ್ತರಿಸಬೇಕಿದೆ ಪತ್ರಕರ್ತರು ತಪ್ಪುಗಳನ್ನು ತಿದ್ದು ಜಾಗೃತಿ ಮೂಡಿಸಿ ಸಾಮರಸ್ಯದ ಮೂಲಕ ಬೆಳವಣಿಗೆ ಯಾಗಬೇಕಿದೆ ಯಾವ ಪತ್ರಕರ್ತನಿಗೆ ಅನ್ಯಾಯವಾದಗ ಸಂಘ ಬೆಂಬಲವಾಗಿ ನಿಲ್ಲುತ್ತದೆ ಎಂದರು.ಪತ್ರಿಕಾ ದಿನಾಚರಣೆ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತರುಗಳಾದ ಎಚ್ ಜಿ ವೆಂಕಟೇಶಮೂರ್ತಿ, ದಿವಂಗತ ಜಿ ಇಂದ್ರಕುಮಾರ್, ತಿಪಟೂರು ಸೋಮ ಶೇಖರ್, ಕೇಶವಮೂರ್ತಿ ಭಟ್, ಕೆ ಬಿ ಚಂದ್ರಮೌಳಿ, ಟಿ ಎಸ್ ತ್ರಿಯಂಬಕ ಇವರುಗಳನ್ನ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಪತ್ರಿಕಾ ದಿನಾಚರಣೆಯಲ್ಲಿ ತುಮಕೂರು ರೋಟರಿ ಕ್ಲಬ್ ಅಧ್ಯಕ್ಷರಾದ ರಾಜೇಶ್ವರಿರುದ್ರಪ್ಪ, ಸಂಘದ ಉಪಾಧ್ಯಕ್ಷರಾದ ಎಲ್ ಚಿಕ್ಕಿರಪ್ಪ ಶಾನಾ ಪ್ರಸನ್ನಮೂರ್ತಿ, ಪ್ರಧಾನ ಕಾರ್ಯದರ್ಶಿ ಟಿ ರಘುರಾಮ್ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಸಿದ್ದಲಿಂಗಸ್ವಾಮಿ ಸೇರಿದಂತೆ ಪತ್ರಕರ್ತರ ಸಂಘದ ನಿರ್ದೇಶಕರುಗಳು, ಪದಾಧಿಕಾರಿಗಳು ಜಿಲ್ಲೆಯ ಪತ್ರಕರ್ತರು ಉಪಸ್ಥಿತರಿದ್ದರು.