ಚಿಕ್ಕಬಳ್ಳಾಪುರ: ತಾಲ್ಲೂಕು ಮನೆ ಮಾತಾಗಿರುವ ಸಿವಿವಿ ಮತ್ತು ಕೆವಿ ದತ್ತಿ ಶಿಕ್ಷಣ ಸಂಸ್ಥೆಗಳಿಂದ ಇದೆ ತಿಂಗಳ 30 ರಂದು ಹಮ್ಮಿಕೊಂಡಿರುವ 28 ನೇ ದತ್ತಿ ದಿನಾಚರಣೆ ಹಾಗು ಸಿವಿವಿ ರವರ 109 ನೇ ಜಯಂತಿ ಅಂಗವಾಗಿ ಎರಡೂ ದತ್ತಿಗಳ ಶಿಕ್ಷಕಣ ಸಂಸ್ಥೆಗಳ ಸಿಬ್ಬಂದಿ ವರ್ಗಕ್ಕೆನಡೆಸುತ್ತಿರುವ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ದೆ ಇಂದು ಮುಂದುವರೆದಿತ್ತು ,
ನಗರದ ಪಿಪಿಹೆಚ್ ಎಸ್ ಶಾಲೆಯಲ್ಲಿ ಇಂದು ನಡೆದ ಹಲವು ಸ್ಪರ್ದೆಗಳಲ್ಲಿ ರಾಗಿಮುದ್ದೆ ತಿನ್ನುವ ಸ್ಪರ್ದೆ ಬಾಳೆ ಹಣ್ಣು ತಿನ್ನುವ ಸ್ಪರ್ದೆ ಸ್ಥಳದಲ್ಲಿಯೇ ಚಾಟ್ಸ್ ತಯಾರಿಸುವ ಸ್ಪರ್ದೆ ಏಕಪಾತ್ರಾಬಿನಯ, ಚಲನ ಚಿತ್ರಕ್ಕೆ ನೃತ್ಯ ಜಾನಪದ ನೃತ್ಯ, ಚಿತ್ರಗೀತೆ, ಚರ್ಚಾ ಸ್ಪರ್ದೆ ಆಶುಬಾಷಣ, ರಸಪ್ರಶ್ನೆ ಇತರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನೂರಾರು ಶಿಕ್ಷಕರು ಬೋದಕೇತರ ಸಿಬ್ಬಂದಿ ಪಾಲ್ಗೊಂಡು ಹಲವಾರು ಬಹುಮಾನಗಳನ್ನ ತಮ್ಮದಾಗಿಸಿಕೊಂಡರು.
ಎರಡನೆ ದಿನದ ಸಾಂಸ್ಕೃತಿಕ ಚಟುವಟಿಕೆಗಳನ್ನ ದತ್ತಿ ಅಧ್ಯಕ್ಷರು ಕೆ.ವಿ.ನವೀನ್ ಕಿರಣ್ ಟ್ರಸ್ಟಿಗಳಾದ ಸಾಯಿಪ್ರಬು, ಶ್ರೀನಿವಾಸ್, ನ್ರಸಭೆ ಸದಸ್ಯೆ ನಿರ್ಮಲಾಪ್ರಭು, ಉದ್ಯಮಿ ಮಹೇಶ್, ಪ್ರಾಂಶುಪಾಲ ನಾರಾಯಣಸ್ವಾಮಿ ಗುಂಪುಮರದ ಆನಂದ್ ಆರ್ ವೆಂಕಟೇಶ್, ಪಿ ಆರ್ ಒ ಎನ್ ವೆಂಕಟೇಶ್ ಇತರರು ಇದ್ದರು.