ಬೊಮ್ಮನಹಳ್ಳಿ: ಸಾಂಸ್ಕೃತಿಕ ಹಾಗೂ ಕಲಾ ಚಟುವಟಿಕೆಗಳು ಮನುಷ್ಯನ ಕ್ರಿಯಾ ಶೀಲತೆಯನ್ನು ಹೆಚ್ಚಿಸುತ್ತದೆ ಎಂಬುದಾಗಿ ಶಾಸಕ ಎಂ.ಸತೀಶ್ ರೆಡ್ಡಿ ತಿಳಿಸಿದರು.ಅವರು ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಅರಕೆರೆ ವಾರ್ಡಿನ ಬನ್ನೇರುಘಟ್ಟ ರಸ್ತೆಯ ಎಸ್ಟೀಮ್ ಅಪಾರ್ಟ್ಮೆಂಟ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಕಲಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ಕಲಾ ಪ್ರತಿಭೆಯು ಅಡಗಿರುತ್ತದೆ ಅದನ್ನು ಹೊರಹಾಕಲು ಒಂದು ಸೂಕ್ತವಾದ ವೇದಿಕೆ ಬೇಕಾಗುತ್ತದೆ ಅದಕ್ಕಾಗಿ ಇಂತಹ ಸಾಂಸ್ಕೃತಿಕ ಕಲಾ ಪ್ರದರ್ಶನ ಕಾರ್ಯಕ್ರಮಗಳು ಅವಶ್ಯಕವಾಗಿವೆ ಎಂದರು.ಇದೇ ಸಂದರ್ಭದಲ್ಲಿ ಅರಕೆರೆ ವಾರ್ಡಿನ ಬಿಬಿಎಂಪಿಸದಸ್ಯೆ ಸದಸ್ಯೆ ಭಾಗ್ಯಲಕ್ಷ್ಮೀಮುರಳಿ ಮಾತನಾಡುತ್ತ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು, ಕಲಾಅಭಿರುಚಿ ಇರುವ ವ್ಯಕ್ತಿಗಳು ಜೀವ ಉತ್ಸಾಹಿಗಳಾಗಿರುತ್ತಾರೆ,ಆದುದ್ದರಿಂದ ಇಂತಹ ಕಾರ್ಯಕ್ರಮಕ್ಕೆ ಎಸ್ಟೀಮ್ ಅಪಾರ್ಟ್ಮೆಂಟ್ ಅಸೋಸಿಯೇಷನ್ ಮುಂದಾಗಿರುವುದು ಸಂತೋಷ ಮತ್ತು ಹೆಮ್ಮೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಗೀತ, ನೃತ್ಯ, ನಾಟಕ, ಗಾಯನ, ಭಾಷಣ,ಇತ್ಯಾದಿಗಳ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ 250 ಕ್ಕೂ ಹೆಚ್ಚು ವ್ಯಕ್ತಿಗಳು ಭಾಗವಹಿಸಿ ಕಲಾ ಪ್ರದರ್ಶನ ನೀಡಿದರು. ಉತ್ತಮವಾಗಿ ಕಲಾ ಪ್ರದರ್ಶನ ನೀಡಿದ ವ್ಯಕ್ತಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಬಿಬಿಎಂಪಿಸದಸ್ಯೆ ಭಾಗ್ಯಲಕ್ಷ್ಮೀಮರಳಿ, ಅರಕೆರೆ ವಾರ್ಡ್ ಬಿಜೆಪಿ ಮುಖಂಡರಾದ ಮುರಳಿ, ಮಾಜಿ ಬಿಬಿಎಂಪಿಸದಸ್ಯ ಪುರುಷೋತ್ತಮ, ಅಧ್ಯಕ್ಷ ಚಂದ್ರಶೇಖರ್, ಪದಾಧಿಕಾರಿಗಳಾದ ವೈಷ್ಣವಿ, ಲೀನಾ ಆಚಾರ್ಯ, ಸುಪ್ರಭ, ನಂದಿನಿ, ಸೌಮೀತಾ, ಶೀತಲ್ ಇದ್ದರು.