ಬೆಂಗಳೂರು: ರವೀಂದ್ರ ಕಲಾಕ್ಷೇತ್ರ ಆವರಣದ ಕನ್ನಡ ಭವನ ನಯನ ಸಭಾಂಗಣದಲ್ಲಿ ಡಾ. ಗುಣವಂತ ಮಂಜು ಅಧ್ಯಕ್ಷತೆಯ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ವತಿಯಿಂದ ಕನ್ನಡ ಮಾಸದಲ್ಲಿ ವಿಶೇಷವಾದ ದಸರೋತ್ಸವ ಕನ್ನಡೋತ್ಸವ ಮತ್ತು ರಾಷ್ಟçಪಿತ ಮಹಾತ್ಮ ಗಾಂಧೀಜಿ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಡಾ. ಗುಣವಂತ ಮಂಜು ಅವರ “ಪದ್ಯದಂಗಡಿ” ಕವನ ಸಂಕಲನದ ಮುಖಪುಟ ಅನಾವರಣಗೊಳಿಸಲಾಯಿತು. ಗುಣವಂತ ಮಂಜು ಅವರು ಮಾತನಾಡಿ, ಸಾಂಸ್ಕೃತಿಕ ಸಿರಿಯನ್ನು ಮತ್ತು ನಾಡಿನ ವೈಭವವನ್ನು ಜಗತ್ತಿಗೆ ಪರಿಚಯಿಸುವ ಸಾರ್ಥಕ ಕೆಲಸವನ್ನು ಸಾಹಿತಿಗಳು, ಕಲಾವಿದರು ಮತ್ತು ವಿವಿಧ ಕ್ಷೇತ್ರದ ಸಾಧಕರು ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.
ನಾಡಿನ ಸಾಂಸ್ಕೃತಿಕ ರಂಗದ ಹಿರಿಯ ಚೇತನ, ಖ್ಯಾತ ಚಲನಚಿತ್ರ ನಟ ಹಾಗೂ ಭರತನಾಟ್ಯ ಕಲಾವಿದ ಡಾ. ಶ್ರೀಧರ್ ರವರಿಗೆ ಕರ್ನಾಟಕ “ಭೂಷಣ ಪ್ರಶಸ್ತಿ”ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯರಾದ ಸಾಹಿತಿ ಡಿ.ಎಸ್ ವೀರಯ್ಯ ನೆರವೇರಿಸಿದರು. ದಿವ್ಯ ಸಾನಿಧ್ಯವನ್ನು ಶಿವಗಂಗೆಯ ಮೇಲಣಗವಿ ಮಠದ ಶ್ರೀ ಶ್ರೀ ಶ್ರೀ ಮಲಯ ಶಾಂತಮುನಿ ಸ್ವಾಮೀಜಿ ರವರ ವಹಿಸಿದ್ದರು. ಅಧ್ಯಕ್ಷತೆಯನ್ನು ಡಾ. ಮಹೇಂದ್ರನಾಥ ಶರ್ಮ ಗುರೂಜಿ, ಪ್ರಶಸ್ತಿ ಪ್ರಧಾನವನ್ನು ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಡಾ. ಬಿ.ಆರ್ ಹಿರೇಮಠ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಸಂಜೆ ಪ್ರಭ ಪತ್ರಿಕೆ ಸಂಪಾದಕರಾದ ಶ್ರೀ ವೆಂಕಟೇಶ ಪೈ, ಶ್ರೀ ವೀರಕಪುತ್ರ ಶ್ರೀನಿವಾಸ್, ಡಾ. ಸುಕನ್ಯಾ ಹಿರೇಮಠ, ಕುಮಾರಿ ಚೈತ್ರ, ಡಾ. ಮಂಜುಳಾ ಮಹಾದೇವ್, ಡಾ. ಶ್ರೀನಿವಾಸ್ ಬಾಬು, ಶ್ರೀ ಗೋವಿಂದ ಹಳ್ಳಿ ಕೃಷ್ಣೇಗೌಡ, ಶ್ರೀ ಕೆ.ಎಸ್, ಸತೀಶ್ ಕುಮಾರ್, ಡಾ.
ಎಸ್. ತಿಮ್ಮಯ್ಯ ಭಾಗವಹಿಸಿದ್ದರು. ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಮಲ್ಲವ್ವ, ಲಕ್ಕವ್ವ ,ಹಾಲವ್ವ ಬಸವ್ವ ರವರ ಜಾನಪದ ಸೋಬಾನ ಪದಗಳು ಕಾರ್ಯಕ್ರಮದ ವೈಶಿಷ್ಟ÷್ಯವನ್ನ ಹೆಚ್ಚಿಸಿತು. ಕುಮಾರಿ ಸ್ನೇಹ ನೀಲಪ್ಪ ಗೌಡರವರ ನಿರೂಪಣೆ, ಕಾರ್ಯಕ್ರಮದ ಘನತೆಗೆ ಸಾಕ್ಷಿ ಆಯಿತು.ರಾಜ್ಯದ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಪುರಸ್ಕರಿಸಲಾಯಿತು.ಸಂಸ್ಥೆಯ ನಿರ್ದೇಶಕಿ ಶ್ರೀಮತಿ ವರಲಕ್ಷಿ÷್ಮ ಗುಣವಂತ ಮಂಜು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.