ಚಿಕ್ಕಬಳ್ಳಾಪುರ: ಇಲ್ಲಿನ ಶ್ರೀ ದತ್ತಾತ್ರೇಯ ಸಮಾಜ ಸಾಧು ಮಠ ಟ್ರಸ್ಟ್ ಇವರ ವತಿಯಿಂದ ನಗರದ ಸಾಧು ಮಠದಲ್ಲಿ ಶ್ರೀ ದತ್ತಾತ್ರೇಯ ಸ್ವಾಮಿಯವರ 65ನೇ ವರ್ಷದ ಜಯಂತಿಯ ಸಪ್ತಾಹ ಕಾರ್ಯಕ್ರಮ ಇಂದಿನಿಂದ ಶ್ರೀ ದತ್ತಾತ್ರೇಯ ಸ್ವಾಮಿ ಅವರಿಗೆ ವಿಶೇಷ ಪೂಜಾದಿಗಳನ್ನು ಮಾಡುವ ಮೂಲಕ ಆರಂಭವಾಯಿತು.ಅದರಂತೆ ಬೆಳಗ್ಗೆ ಪ್ರಾತಃಕಾಲ 7 ಗಂಟೆಯಿಂದ ಶ್ರೀ ದತ್ತಾತ್ರೇಯ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ಮಂತ್ರಪುಷ್ಪ, ರಾಜಾಶೀರ್ವಾದ, ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ಮಾಡಲಾಯಿತು.
ಶ್ರೀ ಸ್ವಾಮಿ ಅವರಿಗೆ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಶೃಂಗರಿಸಲಾಗಿತ್ತು.ಪ್ರತಿವರ್ಷದಂತೆ ಪ್ರಸಕ್ತ ಸಾಲಿನ ಶ್ರೀ ದತ್ತಾತ್ರೇಯ ಸ್ವಾಮಿ ಅವರ ಜಯಂತಿ ಕಾರ್ಯಕ್ರಮ ಏಳು ದಿನಗಳ ಕಾಲ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯುವಂತೆ ಟ್ರಸ್ಟಿನ ಪದಾಧಿಕಾರಿಗಳು ಸದಸ್ಯರು ವ್ಯವಸ್ಥಿತವಾಗಿ ದೇವಾಲಯಕ್ಕೆ ತಳಿರು ತೋರಣಗಳಿಂದ ಶೃಂಗರಿಸಿದ್ದರು.
ಪೂಜಾ ಕೈಂಕಾರ್ಯದ ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ವಿ ಕೃಷ್ಣಮೂರ್ತಿ, ಕಾರ್ಯದರ್ಶಿ ಪಿ ಬಿ ರಾಮಚಂದ್ರರೆಡ್ಡಿ, ಸದಸ್ಯರುಗಳಾದ ಎಚ್ ಶ್ರೀನಿವಾಸ್, ಜಿ.ಎಸ್.ಶ್ರೀನಾಥ್, ಕೆಎನ್ ಹರಿಕುಮಾರ್, ಪ್ರೆಸ್ ಎಂ ಕೃಷ್ಣಪ್ಪ, ನಗರಸಭಾ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಆನಂದರೆಡ್ಡಿಬಾಬು, ಸದಸ್ಯರುಗಳಾದ ವಿ. ಸುಬ್ರಹ್ಮಣ್ಯಚಾರಿ ಸೇರಿದಂತೆ ಇತರರು ಇದ್ದರು.