ಬೆಂಗಳೂರು: ಅಮೆಜಾನ್ ಸಾಮಾಜಿಕ ಮಾಧ್ಯಮಗಳ ಪ್ರಚಾರಕರ್ತರ ಕಾರ್ಯಕ್ರಮದ (ಅಮೆಜಾನ್ ಇನ್ಫ್ಲುಯೆನ್ಸರ್ ಪ್ರೋ ಗ್ರಾಂ ) ಮೂಲಕ ದೇಶದಾದ್ಯಂತ 50,000 ಕ್ಕೂ ಹೆಚ್ಚು ವಿಷಯ ಸೃಷ್ಟಿಕರ್ತರ ಜೊತೆ ಸಹಯೋಗ ಹೊಂದಲಾಗಿದೆ ಎಂದು ಅಮೆಜಾನ್ಡಾಟ್ಇನ್ ಇಂದು ಇಲ್ಲಿ ಪ್ರಕಟಿಸಿದೆ. ಈ ನೂರಾರು ಸೃಷ್ಟಿಕರ್ತರು ಅಮೆಜಾನ್ ಲೈವ್ ಕಾರ್ಯಕ್ರಮದ ಭಾಗವಾಗಿದ್ದಾರೆ.
ಪರಸ್ಪರ ಸಂವಾದದ ವೇದಿಕೆಯಾಗಿರುವ ‘ಅಮೆಜಾನ್ ಲೈವ್’-ನಲ್ಲಿ ವೀಕ್ಷಕರು ನೇರವಾಗಿ ವಿಷಯ ಸೃಷ್ಟಿಕರ್ತರು ಮತ್ತು ಬ್ರ್ಯಾಂಡ್ ಪ್ರತಿನಿಧಿಗಳ ಜೊತೆಗೆ ನೇರವಾಗಿ ಒಡನಾಟ ಸಾಧಿಸಬಹುದು.ಪ್ರೈಮ್ ಡೇ 2024- ಕ್ಕೆ ಮೊಬೈಲ್ಗಳು, ಗೃಹೋಪಯೋಗಿ ವಸ್ತುಗಳು,ಗೃಹಾಲಂಕಾರ, ಫ್ಯಾಷನ್ ಮತ್ತು ಸೌಂದರ್ಯ ಪ್ರಸಾಧನ ಸೇರಿದಂತೆ ಹಲವಾರುಉತ್ಪನ್ನಗಳ ವಿಭಾಗಗಳಲ್ಲಿ ನೂರಾರು ವಿಷಯ ಸೃಷ್ಟಿಕರ್ತರು 300ಕ್ಕೂ ಹೆಚ್ಚು ದೃಕ್-ಶ್ರವಣದ ನೇರ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾರೆ. ಇದಕ್ಕೆ ಪೂರಕವಾಗಿ, ಮೊಟೊರೊಲ, ಸ್ಯಾಮ್ಸಂಗ್ ಮತ್ತು ಫಾರೆವರ್21- ಸೇರಿದಂತೆ 7 ಬ್ರ್ಯಾಂಡ್ಗಳು ಅಮೆಜಾನ್ ಪ್ರೈಮ್ ಡೇ- ಸಂದರ್ಭದಲ್ಲಿ `ಅಮೆಜಾನ್ ಲೈವ್’ನಲ್ಲಿ ಪ್ರಮುಖ ಉತ್ಪನ್ನಗಳನ್ನು ಪರಿಚಯಿಸಲಿವೆ.
`ಪ್ರೈಮ್ ಡೇ’ ಅವಧಿಯಲ್ಲಿ ಪ್ರೈಮ್ ಸದಸ್ಯರು ಮಾಹಿತಿದಾಯಕ ಖರೀದಿನಿರ್ಧಾರಗಳನ್ನು ಕೈಗೊಳ್ಳಲು ಈ ವಿಷಯ ಸೃಷ್ಟಿಸುವವರ ಧ್ವನಿಯು ಮಾರ್ಗ ದರ್ಶನ ನೀಡಲು ನೆರವಾಗಲಿದೆ. ಇದು ವಿಷಯ ಸೃಷ್ಟಿಸುವವರಿಗೆ, ಗ್ರಾಹಕರಿಗೆ ಮತ್ತು ಬ್ರ್ಯಾಂಡ್ಗಳಿಗೆ ಲಾಭದಾಯಕವಾಗಿರಲಿದೆ ಎಂದು ಅಮೆಜಾನ್ನ ಭಾರತ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳ ಖರೀದಿ ಅನುಭವ ವಿಭಾಗದ ನಿರ್ದೇಶಕ ಕಿಶೋರ್ ಥೋಟಾ ಅವರು ಹೇಳಿದ್ದಾರೆ.
ಇದೊಂದು ನಂಬಿಕೆ ಮತ್ತು ಉತ್ಸಾಹ ಬೆಳೆಸುವ ಅದ್ಭುತ ಮಾರ್ಗವಾಗಿದೆ. ಅದರ ಭಾಗವಾಗಿರುವುದಕ್ಕೆ ನನಗೆ ತುಂಬ ಖುಷಿಯಾಗುತ್ತಿದೆ ಎಂದು ಅಮೆಜಾನ್ ಇನ್ಫ್ಲುಯೆನ್ಸರ್ ಪ್ರೋಗ್ರಾಂನ ಸಾಮಾಜಿಕ ಮಾಧ್ಯಮ ಪ್ರಚಾರಕರ್ತೆ ಭೂಮಿಕಾ ಗುರುನಾನಿ ಅವರು ಹೇಳಿದ್ದಾರೆ.