ದೆಹಲಿ: ಪ್ರಮುಖವಾಗಿ 9 ಅಂಶಗಲಿಗೆ ಒತ್ತು ನೀಡುವ ಮೂಲಕ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಲಾಗಿದೆ. ಲೋಕಸಭೆಯಲ್ಲಿಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಏಳನೇ ಬಾರಿಗೆ ಬಜೆಟ್ ಮಂಡನೆ ಮಾಡಿದ್ದಾರೆ.
ಯುವಕರು, ಮಹಿಳೆಯರು, ಬಡವರು ಮತ್ತು ರೈತರ ಮೇಲೆ ಕೇಂದ್ರೀಕರಿಸಿ ಬಜೆಟ್ ಸಿದ್ಧಪಡಿಸಲಾಗಿದೆ ಎಂದಿರುವ ಅವರು, “ಭಾರತದ ಜನರು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಮೇಲೆ ತಮ್ಮ ನಂಬಿಕೆಯನ್ನು ಪುನರುಜ್ಜೀವನಗೊಳಿಸಿದ್ದಾರೆ. ಐತಿಹಾಸಿಕ ಮೂರನೇ ಅವಧಿಗೆ ಮರು ಆಯ್ಕೆ ಮಾಡಿದ್ದಾರೆ.” ಬಜೆಟ್ನ ಗಮನವು ಯುವಕರು, ಮಹಿಳೆಯರು, ಬಡವರು ಮತ್ತು ರೈತರ ಮೇಲೆ ಇರುತ್ತದೆ. ಉದ್ಯೋಗ, ಕೌಶಲ್ಯ, ಎಂಎಸ್ಎಂಇ ಮತ್ತು ಮಧ್ಯಮ ವರ್ಗದ ಮೇಲೂ ಬಜೆಟ್ ನಲ್ಲಿ ಗಮನ ಹರಿಸಲಾಗಿದೆ ಎಂದು ತಿಳಿಸಿದ್ದಾರೆ.
ಭಾಷಣದ ಆರಂಭದಲ್ಲಿ ಪ್ರಮುಖವಾಗಿ ನರೇಂದ್ರ ಮೋದಿ3ನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದನ್ನು ಪರಸ್ತಾಪಿಸಿ ಅವರ ಕಾರ್ಯವೈಖರಿ ಬಗ್ಗೆ ಶ್ಲಾಘನೆ ಮಾಡಿದರು..ಮೋದಿಯವರ 3ನೇ ಅವಧಿಯ ಸರ್ಕಾರದ 9 ಆದ್ಯತೆಗಳನ್ನು ಪಟ್ಟಿ ಮಾಡಿರುವ ಸಚಿವೆ, ಅವುಗಳು: ಕೃಷಿಯಲ್ಲಿ ಉತ್ಪಾದಕತೆ ಮತ್ತು ಸ್ಥಿತಿಸ್ಥಾಪಕತ್ವ, ಉದ್ಯೋಗ ಮತ್ತು ಕೌಶಲ್ಯ, ಎಚ್ಆರ್ಡಿ ಮತ್ತು ಸಾಮಾಜಿಕ ನ್ಯಾಯ, ಉತ್ಪಾದಕತೆ & ಸೇವೆಗಳು ನಗರಾಭಿವೃದ್ಧಿ ಶಕ್ತಿ ಭದ್ರತೆ, ಮೂಲಭೂತ ಸೌಕರ್ಯ, ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಮುಂದಿನ ಪೀಳಿಗೆಯ ಸುಧಾರಣೆಗಳ ಪ್ರಸ್ತಾಪ ಮಾಡಿದ್ದಾರೆ.
ಕೃಷಿ ಸಂಶೋಧನೆಯು ಉತ್ಪಾದಕತೆ ಮತ್ತು ಹವಾಮಾನ ಸ್ಥಿತಿಸ್ಥಾಪಕ ಪ್ರಭೇದಗಳನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸಲು ರೂಪಾಂತರಗೊಳ್ಳುತ್ತದೆ. ಹವಾಮಾನ ಸ್ಥಿತಿಸ್ಥಾಪಕ ಬೆಳೆ ಪ್ರಭೇದಗಳನ್ನು ಅಭಿವೃದ್ಧಿಪಡಿಸಲು ಕೃಷಿ ಸಂಶೋಧನಾ ಕೇಂದ್ರಗಳನ್ನು ಸಮಗ್ರ ಪರಿಶೀಲನೆಯನ್ನು ಕೈಗೊಳ್ಳಲಾಗುವುದು ಎಂದಿದ್ದಾರೆ.



