ಬೆಂಗಳೂರು: ಡಾಬರ್ ಇಂಡಿಯಾ ಲಿಮಿಟೆಡ್ನಿಂದ ಭಾರತದ ನೆಚ್ಚಿನ ಆದ್ಯತೆಯ ಪ್ಯಾಕ್ ಮಾಡಲಾದ ಹಣ್ಣಿನ ಜ್ಯೂಸ್ ಬ್ರಾಂಡ್ ರಿಯಲ್ ತನ್ನ ವೈವಿಧ್ಯಮಯ ಪಾನೀಯಗಳ-ರಿಯಲ್ ಜ್ಯೂಸ್ಗಳು ಮತ್ತು ಪಾನೀಯಗಳು ಮತ್ತು ರಿಯಲ್ ಮ್ಯಾಂಗೊ ಡ್ರಿಂಕ್ ಪ್ರಚಾರ ಕೈಗೊಳ್ಳಲು ಬಾಲಿವುಡ್ ನಟಿ ಸಾರಾ ಅಲಿ ಖಾನ್ರೊಂದಿಗೆ ಇಂದು ಒಪ್ಪಂದ ಮಾಡಿಕೊಂಡಿದೆ.
ಡಾಬರ್ ಇಂಡಿಯಾ ಲಿಮಿಟೆಡ್ನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಶ್ರೀ ಮಯಾಂಕ್ ಕುಮಾರ್ ಅವರು, ರಿಯಲ್ ಬೈಟ್ಸ್ನ ಬಿಡುಗಡೆ ಪ್ರಕಟಿಸಿ ಮಾತನಾಡಿ, `ರಿಯಲ್ ಬೈಟ್ಸ್ನ ಬಿಡುಗಡೆಯೊಂದಿಗೆ ನಮ್ಮ ಪೇಯಗಳ ವರ್ಗವನ್ನು ವಿಸ್ತರಿಸಲು ನಾವು ಸಂತಸ ಪಡುತ್ತೇವೆ ಮತ್ತು ಯೂತ್ ಐಕಾನ್ ಆದ ಸಾರಾ ಅಲಿ ಖಾನ್ ಅವರನ್ನು ರಿಯಲ್ ಕುಟುಂಬಕ್ಕೆ ಸ್ವಾಗತಿಸಲು ಬಹಳ ಉತ್ಸುಕರಾಗಿದ್ದೇವೆ.
ಈ ನೂತನ ಕೊಡುಗೆಗಳು ಒಟ್ಟಾರೆ ಪೇಯದ ಅನುಭವ ಹೆಚ್ಚಿಸುತ್ತವೆಯಲ್ಲದೇ ಮಾರುಕಟ್ಟೆಯಲ್ಲಿ ರಿಯಲ್ನ ಮುಂಚೂಣಿಯ ಸ್ಥಾನವನ್ನು ದೃಢಪಡಿಸುತ್ತವೆ ಎಂದು ನಾವು ನಂಬುತ್ತೇವೆ ಎಂದು ಹೇಳಿದರು.ಸಾರಾ ಅಲಿ ಖಾನ್ ರಿಯಲ್ ಜೊತೆಗಿನ ತನ್ನ ಸಹಯೋಗದ ಬಗ್ಗೆ ಮಾತನಾಡಿ, ನಾನು ಡಾಬರ್ ಕುಟುಂಬದ ಭಾಗವಾಗಲು ಮತ್ತು ಭಾರತದ ನೆಚ್ಚಿನ ಹಣ್ಣಿನ ರಸ ಬ್ರ್ಯಾಂಡ್ ರಿಯಲ್ನ ಇತ್ತೀಚಿನ ಕೊಡುಗೆಯಾದ ರಿಯಲ್ ಬೈಟ್ಸ್ ಪ್ರತಿನಿಧಿಸುವ ಮುಖವಾಗಲು ಸಂತಸಪಡುತ್ತೇನೆ ಎಂದರು.
ಸಾರಾ ಅಲಿ ಖಾನ್ ಅವರನ್ನು ರಿಯಲ್ ಕುಟುಂಬಕ್ಕೆ ಸ್ವಾಗತಿಸಲು ನಾವು ಸಂತೋಷಪಡುತ್ತೇವೆ. ಈ ಸಹಯೋಗ ಬ್ರ್ಯಾಂಡ್ ಅನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ನಮ್ಮ ಗ್ರಾಹಕರೊಂದಿಗೆ ಉತ್ತಮ ಸಂಪರ್ಕವನ್ನು ನಿರ್ಮಿಸಲು ನಮಗೆ ಸಹಾಯ ಮಾಡುತ್ತದೆ ಎಂಬ ವಿಶ್ವಾಸ ನಮಗಿದೆ. ಎಂದು ಡಾಬರ್ ಇಂಡಿಯಾ ಲಿಮಿಟೆಡ್ನ ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಮೋನಿಶಾ ಪ್ರಶೆರ್ ಅವರು ಹೇಳಿದರು.