ರಾಮನಗರ : ನಗರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಕಷ್ಟು ಯೋಜನೆಗಳನ್ನು ತಯಾರಿಸಿ ಕೊಂಡಿದ್ದು,ಹಂತಹಂತವಾಗಿ ಆಧ್ಯತೆ ಮೇರೆಗೆ ಎಲ್ಲರ ಸಹಕಾರದಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ನಗರಸಭೆಯ ನೂತನ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ತಿಳಿಸಿದರು.ಭಾನುವಾರ ವಿವಿಧ ಬಡಾವಣೆಗಳ ಮುಖಂಡರು ಹಾಗೂ ಸಾರ್ವಜನಿಕರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶೇಷಾದ್ರಿ ಅವರು, ಜಿಲ್ಲಾ ಕೇಂದ್ರದ ಜನತೆ ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಸಾರ್ವಜನಿಕರ ನಿರೀಕ್ಷೆಗೆ ತಕ್ಕಂತೆ ಕೆಲಸ ನಿರ್ವಹಿಸುತ್ತೇನೆ. ನಗರಸಭೆಯ ಅಧ್ಯಕ್ಷರಾದ ಬಳಿಕ ವಿವಿಧ ವಾರ್ಡ್ ಮುಖಂಡರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಈ ವೇಳೆ ಜನರು ತಮ್ಮ ವಾರ್ಡಿನ ಕುಂದುಕೊರತೆಯನ್ನು ಹೇಳಿಕೊಳ್ಳುತ್ತಿರುವುದು ಜನತೆಯಲ್ಲಿನ ಅಭಿವೃದ್ದಿ ಚಿಂತನೆಯ ನಿರೀಕ್ಷೆ ತೋರಿಸುತ್ತಿದೆ ಎಂದು ಹೇಳಿದರು.ನಗರಸಭೆಯ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ.
ಇವುಗಳ ನಿವಾರಣೆ ಸಂಬಂಧ ಅಧಿಕಾರಿಗಳ ಹಾಗೂನಗರಸಭೆ ಸದಸ್ಯರ ತಂಡ ರಚಿಸಿಕೊಂಡು ಕಾರ್ಯನಿರ್ವಹಿಸಲಾಗುತ್ತದೆ. ನಗರಸಭೆಯ ಅಧಿಕಾರಿಗಳ ಸಹಕಾರ ಪಡೆದು ವಾರ್ಡ್ ಸಭೆಗಳನ್ನು ಆಯೋಜಿಸಲಾಗುತ್ತದೆ. ಈ ವೇಳೆ ಪ್ರತಿ ವಾಡ್ರ್ಗಳಲ್ಲಿನ ಸಮಸ್ಯೆಗಳನ್ನು ಆಲಿಸಿ ಆದ್ಯತೆಯ ಮೇರೆಗೆ ಪರಿಹಾರಿ ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದು ಭರವಸೆ ನೀಡಿದ ಅವರು, ಶೀಘ್ರದಲ್ಲಿಯೇ ರಾಮನಗರ ಜಲ ಮಂಡಳಿ ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸಿ ನಗರ ಪ್ರದೇಶದ ನಿವಾಸಿಗಳಿಗೆ ದಿನದ 24*7 ಗಂಟೆ ನೀರು ಪೂರೈಸುವ ಯೋಜನೆ ಕುರಿತು ಚರ್ಚಿಸಲಾಗುತ್ತದೆ ಎಂದು ಹೇಳಿದರು.
ಅಭಿವೃದ್ಧಿ ಕೆಲಸಗಳನ್ನು ಮಾಡಲು ನಗರಸಭೆಯಲ್ಲಿ ಹಣದ ಅವಶ್ಯಕತೆಯಿದ್ದು, ಆರ್ಥಿಕ ಸಂಪನ್ಮೂಲ ಕ್ರೂಢೀಕರಣ ಮಾಡಲು ಹೆಚ್ಚಿನ ಆಧ್ಯತೆ ನೀಡಬೇಕಾಗಿದೆ. ರಾಮನಗರ ನಗರಸಭೆಯನ್ನು ಜನಸ್ನೇಹಿ, ಸ್ವಚ್ಛತೆಗೆ ಆದ್ಯತೆ ಕೊಟ್ಟು ಪರಿಸರ ಸ್ನೇಹಿ ವಾತಾವರಣ ನಿರ್ಮಿಸಿ, ಸಮಪರ್ಕ ತ್ಯಾಜ್ಯ ವಿಲೇವಾರಿ ಮೂಲಕ ರಾಜ್ಯದಲ್ಲಿಯೇ ರಾಮನಗರ ನಗರಸಭೆಯನ್ನು ಮಾದರಿಯನ್ನಾಗಿಸುವ ಸಂಕಲ್ಪ ಹೊಂದಿದ್ದೇವೆ. ಆಡಳಿತ ರೂಢ ಸದಸ್ಯರ ಜತೆಗೆ, ವಿಪಕ್ಷದವರ ಸಹಕಾರ ಪಡೆದು ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಈ ವೇಳೆ ವಿವಿಧ ಬಡಾವಣೆಗಳ ಮುಖಂಡರಾದ ನಗರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಅಸ್ಮದ್, ಸದಸ್ಯರಾದ ನರಸಿಂಹ, ಆರೀಪ್, ನಾಗಮ್ಮ, ಮಾಜಿ ಸದಸ್ಯ ಸುರೇಶ್ (ದೊಡ್ಡಿಸುರೇಶ್), ಮುಖಂಡ ರಾದ ಶಿವಕುಮಾರಸ್ವಾಮಿ, ಒಂದನೇ ವಾರ್ಡಿನ ಗಿರೀಶ್ (ಸ್ಪೆಟರ್), ಲಕ್ಷ್ಮಣ್, ಯಶವಂತರಾವ್, ಸುಬ್ರಮಣಿ, ಗುಂಡಪ್ಪ, ಶ್ರೀಧರ್, ದಯಾ, ಜಯಣ್ಣ, ಲೋಕೇಶ್, ಸಮದ್, ವಿಜಿ, ಸಿದ್ದರಾಜು ಮತ್ತಿತರರು ಇದ್ದರು.