ಬೆಂಗಳೂರು: ಇಲ್ಲಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ಶೋ ನಡೆಯುತ್ತಿದೆ. ಇಂದಿನಿಂದ ಸಾರ್ವಜನಿಕರ ವೀಕ್ಷಣೆಗೂ ಅವಕಾಶ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಏರ್ ಶೋದತ್ತ ಮುಖ ಮಾಡುತ್ತಿದ್ದಾರೆ. ಪರಿಣಾಮ ಬೆಂಗಳೂರು ಜನರಿಗೆ ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಯಲಹಂಕ ಸಂಪರ್ಕಿಸುವ ರಸ್ತೆಗಳಲ್ಲಿ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ.
ಫ್ಲೈ ಓವರ್ ಮೇಲೆಯೂ ಜಾಮ್, ಫ್ಲೈ ಓವರ್ ಕೆಳಭಾಗದಲ್ಲಿಯೂ ಜಾಮ್ ಆಗಿದ್ದು, ಪರದಾಡುವಂತೆ ಆಗಿದೆ. ಏರ್ ಶೋ ಹೋಗುವವರು, ಇನ್ನೊಂದೆಡೆ ನಿತ್ಯದ ಕೆಲಸಕ್ಕೆ ಹೋಗುವವರಿಗೆ ತೊಂದರೆ ಆಗಿದೆ. ಜಾಮ್ ಆಗಿರುವ ವಾಹನಗಳು ಪ್ರತಿ 15 ರಿಂದ 20 ನಿಮಿಷಕ್ಕೆ ಮಾತ್ರ ಮೂವ್ ಆಗುತ್ತಿವೆ. ಇದರಿಂದಾಗಿ ಯಲಹಂಕ ಸುತ್ತ ನಾಲ್ಕೈದು ಕಿಲೋಮೀಟರ್ ಟ್ರಾಫಿಕ್ ಜಾಮ್ ಆಗಿದೆ. ಸಂಚಾರಕ್ಕೆ ಅಡಚಣೆ ಹಿನ್ನೆಲೆಯಲ್ಲಿ ಜನರು ಹಿಡಿಶಾಪ ಹಾಕುತ್ತಿದ್ದಾರೆ.