ಬೆಂಗಳೂರು: ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೂಂಡನಹಳ್ಳಿಯಲ್ಲಿ ಸ್ನೇಹಿತರಿಬ್ಬರು ಸಾಲದ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಜಗಳವಾಡಿಕೊಂಡು ಯೋಗೇಶ್ ಗೌಡ ಎಂಬಾತನಿಗೆ
ತನ್ನ ಸ್ನೇಹಿತರಾದ ರಾಘವೇಂದ್ರ ಮತ್ತು ಇತರರು ಸೇರಿ ತಲೆಗೆ ರಾಡ್ ನಿಂದಹೊಡೆದು ಗಾಯಗೊಳಿಸಿರುವ ಘಟನೆ ವರದಿಯಾಗಿದೆ.
ಆರೋಪಿ ಮತ್ತು ಪಿರಿಯಾ ದರಿಬ್ಬರು ಎಂಜಿ ರಸ್ತೆಯಲ್ಲಿರುವ ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಅನಲಿಸಿಸ್ ಆಗಿ ಕೆಲಸ ಮಾಡುತ್ತಿರುತ್ತಾರೆ.ಯೋಗೀಶ್ ಗೌಡ 50,000 ರೂಪಾಯಿಯನ್ನು ಕೇಳಲು ಹೋದಾಗ ರಾಘವೇಂದ್ರ, ಗೌತಮ್ ಮತ್ತು ಹರಿಪ್ರಸಾದ್ ರವರುಗಳು ರಾಡ್ ನಿಂದ ಹೊಡೆದಿದ್ದ ಪರಿಣಾಮ ಯೋಗೇಶ್ ಗೌಡ ಮತ್ತು ಶಾಬಾಸು ರವರು ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎಂದು ಪೀಣ್ಯ ಇನ್ಸ್ಪೆಕ್ಟರ್ ತಿಳಿಸಿರುತ್ತಾರೆ. ಮೂರು ಜನ ಆರೋಪಿಗಳನ್ನು ಬಂಧಿಸಿರುತ್ತಾರೆ.