ಹನೂರು: ಪಟ್ಟಣದ ಶ್ರೀ ಜಿ.ವಿ.ಗೌಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಇಕೋ ಕ್ಲಬ್ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಹನೂರು ಉಪ ವಲಯ ಅರಣ್ಯಾಧಿಕಾರಿ ನಂದೀಶ್ ರವರು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆಯು ವನ್ಯ ಜೀವಿಗಳ ತಾಣ, ಜಿಲ್ಲೆಯ ಅರ್ಧಭಾಗ ಅರಣ್ಯ ಸಂಪತ್ತಿನಿಂದ ಕೂಡಿ ಅನೇಕ ಜೀವ ವೈವಿಧ್ಯತೆಗಳಿಂದ ಕೂಡಿದೆ.
ಈ ಜಿಲ್ಲೆಯಲ್ಲಿ ನಾವು ಹುಟ್ಟಿರುವುದಕ್ಕೆ ಹೆಮ್ಮೆ ಪಡಬೇಕಾಗಿದೆ. ಬಂಡೀಪುರ, ಬಿಳಿಗಿರಿರಂಗನ ಬೆಟ್ಟ, ಮಹದೇಶ್ವರ ಬೆಟ್ಟಗಳ ಅರಣ್ಯಗಳು ಹುಲಿ ಸಂರಕ್ಷಿತ ತಾಣವಾಗಿದೆ.ರಾಜ್ಯದಲ್ಲಿಯೇ ಅತೀ ಹೆಚ್ಚು ಹುಲಿ ಮತ್ತು ಆನೆಗಳನ್ನು ಹೊಂದಿರುವ ಜಿಲ್ಲೆ ಅಂದರೆ ಅದು ನಮ್ಮ ಹೆಮ್ಮೆಯ ಚಾಮರಾಜನಗರ.ಇಲ್ಲಿನ ಅರಣ್ಯದಲ್ಲಿ ಸಿಗುವಂತಹ ವೈದ್ಯಕೀಯ ಸಸ್ಯ ಕೀಟಗಳು, ಆಯುರ್ವೇದ ಸಸ್ಯಗಳು ಇಲ್ಲಿನ ಬುಡಕಟ್ಟು ಜನಾಂಗಕ್ಕೆ ಹೆಚ್ಚುಪರಿಚಯವಾಗಿದೆ.ಅನೇಕ ರೋಗಗಳಿಗಳನ್ನು ಇಲ್ಲಿ ಸಿಗುವಂತಹ ಸಸ್ಯಗಳಿಂದ ಗುಣಪಡಿಸಲಾಗಿದೆ. ನಮ್ಮ ಪೂರ್ವಜರು ಅರಣ್ಯವನ್ನು ಸಂಪೂರ್ಣ ಅರ್ಥಮಾಡಿಕೊಂಡಿದ್ದಾರೆ ಅದಕ್ಕೆ ಇವರು ಹೆಚ್ಚು ಆರೋಗ್ಯವಂತರಾಗಿದ್ದರು ಎಂದು ತಿಳಿಸಿದರು.
ವನ್ಯ ಜೀವಿಗಳೆಂದರೆ ಹುಲಿ, ಕರಡಿ, ಜಿಂಕೆ, ಆನೆ. ವಿವಿಧ ಬಗೆಯ ಕೀಟಗಳು, ಪಕ್ಷಿ ಪ್ರಬೇಧಗಳು, ಸಸ್ಯಗಳು ಎಂದರ್ಥ ಇದರ ಸಂರಕ್ಷಣೆ ನಮ್ಮೇಲ್ಲರ ಹೊಣೆಯಾಗಿದೆ. ನಮ್ಮ ಪೂರ್ವಿಕರು ಪ್ರಕೃತಿ ಯನ್ನುಅರ್ಥಮಾಡಿಕೊಂಡಿದ್ದರು ಅವರು ಸರಳವಾಗಿ ಬದುಕಿದರು. ಇಂದಿನ ನಗರೀಕರಣದಿಂದ ಕೃಷಿ ಭೂಮಿ ಮತ್ತು ಪ್ರಕೃತಿ ನಾಶವಾಗುತ್ತದೆಬಳ್ಳಾರಿಯಲ್ಲಿ ಕಬ್ಬಿಣ ಅದಿರುಗೋಸ್ಕರ ಅರಣ್ಯ ನಾಶಮಾಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ವಾಯುಮಾಲಿನ್ಯದಿಂದ ದೆಹಲಿಯಲ್ಲಿ ಶುದ್ದಗಾಳಿ ಇಲ್ಲ. ಚಾಮರಾಜನಗರ ಶುದ್ದಗಾಳಿ ಸಿಗುವಂತಹ ಜಿಲ್ಲೆಯಯಾಗಿದೆ ಇದಕ್ಕೆ ಕಾರಣ ಅರಣ್ಯ.ಮನೆಯ ಸುತ್ತಲೂ ಸಸ್ಯ ಬೆಳಸಬೇಕು ಹಾಗೂಮುಂದಿನ ಪೀಳಿಗೆಗೋಸ್ಕರ ಅರಣ್ಯ ಉಳಿಸಬೇಕು.ಅರಣ್ಯ ಪ್ರದೇಶದೊಳಗೆ ಪ್ಲಾಸ್ಟಿಕ್ ನಿಷೇದಮಾಡಬೇಕು. ಬಟ್ಟೆ ಬ್ಯಾಗ್ ಗಳನ್ನು ಬಳಸಬೇಕು. ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಮಾಡಿ ಅರಣ್ಯ ರಕ್ಷಣೆ ಅರಿವು ಮೂಡಿಸುವಂತಹ ಗುರಿಯನ್ನು ಹೊಂದಿದೆ ಎಂದರು.
ನಂತರ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಬಗ್ಗೆ ಹನೂರು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಜಾಥ ಮಾಡುವುದರ ಮೂಲಕ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಲಾಜರಸ್ ಉಪನ್ಯಾಸಕರಾದ ನಂಜುಂಡಯ್ಯ, ಶಿವಕುಮಾರ್, ಕುಸುಮ, ಸವಿತ, ಫರ್ಹಾನ, ಹರೀಶ್, ಮಹೇಂದ್ರ, ಚೈತ್ರಾ, ನಂದಿನಿ, ರಕ್ಷಿತ, ಸಹನ,ನರ್ಮದಾ, ಸುಮತಿ,ದೇವಿಕಾ, ಆಡಳಿತ ಸಿಬ್ಬಂಧಿಗಳಾದ ಪ್ರಭು, ನಾಗರಾಜು, ಮೂರ್ತಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.