ಬೆಂಗಳೂರು: ಸಾಲ ಕೊಡಿಸುವ ಹೆಸರಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿಗೆ ವಂಚನೆ ಮಾಡಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಯಾವುದೇ ಶೂರಿಟಿ ಇಲ್ಲದೆ ಲಕ್ಷಾಂತರ ರೂಪಾಯಿ ಸಾಲ ಕೊಡುವ ಹೆಸರಲ್ಲೆ ವಂಚನೆ ನಡೆದಿದೆ ಎನ್ನಲಾಗಿದ್ದು, ಈ ಸಂಬAಧ ದೂರು ಬಂದ ಹಿನ್ನೆಲೆಯಲ್ಲಿ ಹೈಗ್ರೌಂಡ್ ಪೊಲೀಸರು ವಶಕ್ಕೆ ಪಡೆದಿರುವ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಆನಂದ್, ರೇಷ್ಮಾ, ಅಂಜುA, ಆನಿಯಾ ಎಂಬುವವರ ವಿರುದ್ದ ನೂರಾರು ಮಂದಿ ವಂಚನೆಗೊಳಗಾ ದವರು ದೂರು ನೀಡಿದ್ದಾರೆ ಎನ್ನಲಾಗಿದೆ.
ಚಾಲಾಕಿ ಮಹಿಳೆ ರೇಷ್ಮಾ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಶ್ರೀಕಾರ ಕೋ ಆಪರೇಟಿವ್ ಸೊಸೈಟಿ ಲೋನ್ ಹೆಸರಲ್ಲಿ ವಂಚನೆ ಆರೋಪ ಕೇಳಿಬಂದಿದೆ. ಒಂದು ಲಕ್ಷದಿಂದ ಇಪ್ಪತೈದು ಲಕ್ಷದವರೆಗೂ ಸಾಲ ಕೊಡಿಸುವ ಹೆಸರಲ್ಲಿ ವಂಚನೆ ಮಾಡಲಾಗಿದೆ. ಸಾಲ ಕೊಡಿಸಲಿಕ್ಕೆ ಪ್ರೊಸೆಸಿಂಗ್ ಫೀಜ್, ಅಕೌಂಟ್ ಓಪನಿಂಗ್ ಫೀಜ್ ಹೆಸರಲ್ಲಿ ಸಾವಿರಾರು ರೂಪಾಯಿ ಹಣ ಪಡೆದಿದ್ದಾರೆ. ಹದಿನೈದು ದಿನಗಳ ಒಳಗಾಗಿ ಸಾಲ ಆಗತ್ತೆ ಎಂದು ನಂಬಿಸಿ ಹಣಪಡೆದು ವಂಚನೆ ಮಾಡಲಾಗಿದೆ.
ಲೋನ್ ಅಪ್ಲೆöÊ ಮಾಡಿದವರ ಮೊಬೈಲ್ ನಂಬರ್ಗಳನ್ನೆ ಲೋನ್ ಅಕೌಂಟ್ ನಂಬರ್ ಎಂದು ನೀಡಲಾಗಿದೆ.
ಎರಡು ಸಾವಿರಕ್ಕೂ ಹೆಚ್ಚು ಜನರಿಂದ ಲೋನ್ ಪ್ರೊಸೆಸಿಂಗ್ ಫೀಜ್ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಹಣ ಪಡೆದು ವಂಚನೆ ಆರೋಪದ ದೂರು ದಾಖಲಾಗಿದೆ.
ನೀಡಿದ ಹಣ ವಾಪಸ್ ಕೇಳಿದರೆ ಪ್ರಭಾವಿ ರಾಜಕಾರಣಿಗಳ ಹೆಸರೇಳಿ ಧಮ್ಕಿ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.