ಬೆಂಗಳೂರು: ಲೇವಾದೇವಿ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಸುಮಾರು 10 ವರ್ಷಗಳಿಂದ ಸ್ನೇಹಿತರು ಹಾಗೂ ಪರಿಚಿತರಿಂದ ಸುಮಾರು 65 ಲಕ್ಷ ರೂಗಳನ್ನು ಸಾಲ ಪಡೆದು ಹಿಂತಿರುಗಸದ್ದಿದ ಕಾರಣ ನಿನ್ನೆಮಧ್ಯರಾತ್ರಿ ಒಂದುವರೆ ಗಂಟೆಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲಗಳ ಪ್ರಕಾರ ಚೀಟಿ ನಡೆಸುತ್ತಿದ್ದ ಸುಮಾರು 80 ಲಕ್ಷ ರೂಪಾಯಿ ಸಾಲ ಮಾಡಿಕೊಂಡು ತಲೆಮರಿಸಿಕೊಂಡಿದ್ದನು, ನಿನ್ನೆ ರಾತ್ರಿ ಮನೆಯಿಂದ 9:30 ಗಂಟೆಗೆ ಹೋದವನು ಮಧ್ಯರಾತ್ರಿ ಎಚ್ಎಎಲ್ ಜಂಕ್ಷನ್ ಬಳಿ ಕೊಲೆ ಮಾಡಿರುತ್ತಾರೆ ಎಂದು ಮೃತನ ಪತ್ನಿ ಗಾಯಿತ್ರಿರವರು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ಮೃತ ಕುಮಾರ್ 39 ವರ್ಷ ವೃತ್ತಿಯಲ್ಲಿ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದನು ಎಂದು ಮಲ್ಲೇಶ್ವರಂ ಎಸಿಪಿ ತಿಳಿಸಿರುತ್ತಾರೆ.ಉತ್ತರ ವಿಭಾಗದ ಡಿಸಿಪಿ ಸೈದುಲ್ಲ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ಪತ್ತೆ ಮಾಡಲು ತಂಡ ರಚಿಸಿರುತ್ತಾರೆ.