ಕೆಲ ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಶಿಕ್ಷಣವನ್ನು ಸರ್ವರಿಗೂ ಸಿಗುವಂತೆ ಮಾಡಿದ ಕೀರ್ತಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ ಮತ್ತು ಸಾವಿತ್ರಿ ಬಾಯಿ ಫುಲೆ ಶ್ರಮ ಅನನ್ಯ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.ದಲಿತ ಸಂಘರ್ಷ ಸಮಿತಿ, ಭೀಮವಾದ ಸಂಘಟನೆಯ ರಾಜ್ಯ ಸಂಸ್ಥಾಪಕ ಬಿ ಎಂ ವೆಂಕಟೇಶ್ ನೇತೃತ್ವದಲ್ಲಿ ವಿದ್ಯಾಮಾತೆ ಸಾವಿತ್ರಿ ಬಾಯಿ ಫುಲೆರವರ 193ನೇ ಜಯಂತಿ ಮತ್ತು ರಾಜ್ಯಮಟ್ಟದ ಸಮಾವೇಶ ಸಮಾರಂಭ ನಗರದ ಟೌನ್ ಹಾಲ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು..
ಮಹಿಳಾ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.ದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆ ಆರಂಭಿಸುವ ಮೂಲಕ ಮಹಿಳಾ ಶಿಕ್ಷಣ ಪದ್ಧತಿಗೆ ಸಾವಿತ್ರಿಬಾಯಿ ಫುಲೆ ಮುನ್ನುಡಿ ಬರೆದರು. ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತ ಮಾಡಿದ ಕಾಲದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಪರಿಣಾಮ ಇಂದು ಮಹಿಳೆಯರು ಎಲ್ಲ ರಂಗಗಳಲ್ಲಿ ಸಾಧನೆ ಮಾಡಲು ಕಾರಣವಾಗಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕೋರ್ ಕಮಿಟಿ ಅಧ್ಯಕ್ಷರಾದ ಸಿದ್ದಾರ್ಥ ಸಿಂಗೇ, ರಾಜ್ಯ ಸಂಘಟನಾ ಸಂಚಾಲಕರುಗಳಾದ ಸಂಜೀವ್ ಕಾಂಬ್ಳೆ, ಡಿ ಸಿದ್ದರಾಜು, ಯಮನಪ್ಪ ,ಹಳ್ಳದ್ದ ಕೇರಿ, ಶ್ರೀನಿವಾಸಲು, ಸುಭಾಷ್ ಚಂದ್ರಮೂರ್ತಿ ಡಿ.ಎನ್. ಹಾಗೂ ರಾಜ್ಯ ಸಮಿತಿ ಸದಸ್ಯರಾದ ಹನುಮಂತಪ್ಪ, ಕೆಂಪಣ್ಣ ಶಿರಹಟ್ಟಿ, ಚಿದಾನಂದ ತಳಕೇರಿ, ಶಶಿಕಾಂತ್ ಕಾಂಬ್ಳೆ, ಆನಂದ ಅರಬಳ್ಳಿ, ಗುರುಬಾಳಪ್ಪ ನವಲಗೇರಿ, ಆನಂದ, ಸಣ್ಣೇಗೌಡ, ಮಾದೇವ, ವೈ ರಾಮಚಂದ್ರ ಬಾಬು, ರಮೇಶ್ ಹರಿಜನ, ಪರಮಾನಂದ ತಳವಾರ್ ಬೆಳಗಾವಿ ವಿಭಾಗ್ಯ ಸಂಚಾಲಕರು ಮತ್ತು ರಾಜ್ಯ ಮಹಿಳಾ ಒಕ್ಕೂಟ ಹಿಂದೂಮತಿ, ಶಿರಗಾವಿ, ಪವಿತ್ರಮ್ಮ ,ಸಂಗೀತ ಕಾಂಬಳೆ ,ರೇಖಾ ಬಂಗಾರಿ, ಸಾವಿತ್ರಿ ಪ್ರಿಯದರ್ಶಿನಿ, ಅನಿತಾ ಕೂರವಾರ, ನಾಗಮ್ಮ, ನಾಗವೇಣಿ ಹಾಗೂ ಜಿಲ್ಲಾ ಪದಾಧಿಕಾರಿಗಳಾದ ಎಸ್ ಬಾಬು ಬೆಂಗಳೂರು ನಗರ ಜಿಲ್ಲಾ ಮಂಜುನಾಥ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.