ಯಲಹಂಕ: ಯಲಹಂಕದ ಸಿಂಗನಾಯ ಕನಹಳ್ಳಿಯಲ್ಲಿ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಪ್ರಚಾರ ಮಾಡಲಾಯಿತು.
ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ನಿರ್ದೇಶಕರ ಚುನಾವಣೆ ಫೆಬ್ರವರಿ 15 ರಂದು ನಡೆಯಲಿದ್ದು, ಈ ಪ್ರಯುಕ್ತ ಯಲಹಂಕ ಕ್ಷೇತ್ರ ಜನಪ್ರಿಯ ಶಾಸಕ ಎಸ್.ಆರ್ ವಿಶ್ವನಾಥ್ ಅವರು ಸಿಂಗನಾಯಕನಹಳ್ಳಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿ ಸಿರುವ ಕೆಲವು ಸ್ಪರ್ಧಿಗಳೊಡನೆ ಭಾಗವಹಿಸಿದ್ದರು.
ಅಭ್ಯರ್ಥಿಗಳಾದ ಎ. ತಿಮ್ಮರಾಯ ಗೌಡ, ಕೆ.ಆರ್.ಪುಟ್ಟರಾಜು, ಎಂ.ಮಂಜುನಾಥ್, ಎನ್. ಶಿವಕುಮಾರ್, ಎಂ.ಪಿ. ಈಶ್ವರಾಚಾರ್, ಎಸ್ .ಎನ್ ರಾಮಚಂದ್ರರೆಡ್ಡಿ, ಡಾ. ವಾಣಿಶ್ರೀ ವಿಶ್ವನಾಥ್, ಪುಷ್ಪಲತಾ ಚಂದ್ರಶೇಖರ್,ಎನ್. ಮುನಿಯಪ್ಪ (ಕೂರ್ಲಪ್ಪ ), ಎನ್. ಎ ಚಂದ್ರು ಹಾಗೂ ಅಮರಾವತಿ, ಅವರವರನ್ನು ಗೆಲ್ಲಿಸಿ ಸಂಘದ ರೈತರ ಶ್ರಯೋಭಿವೃದ್ಧಿಗಾಗಿ , ಸ್ಪರ್ಧಿಗಳಿಗೆ ಮತ ಚಲಾಯಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರು, ಬಿಜೆಪಿ ಮುಖಂಡರು ಆದ ಪ್ರಶಾಂತ್ ರೆಡ್ಡಿ ಅವರು ಸೇರಿದಂತೆ ಎಲ್ಲಾ ಬಿಜೆಪಿ ಮುಖಂಡರುಗಳು, ಸಿಂಗನಾಯಕನಹಳ್ಳಿ ಪಂಚಾಯಿತಿ ಪದಾಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಸ್ಥಳೀಯ ಜನತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.ಪ್ರಶಾಂತ್ ರೆಡ್ಡಿ ಮತ್ತಿತರರು ಜನಪ್ರಿಯ ಶಾಸಕರಾದ ಎಸ್ಆರ್ ವಿಶ್ವನಾಥ್ ರನ್ನು ಸನ್ಮಾನಿಸಿದರು. ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ಸಂಘದ ಉದ್ದೇಶ, ರೈತರಿಗೆ ಆಗುತ್ತಿರುವ ಅನುಕೂಲ, ರೈತರನ್ನು ಆರ್ಥಿಕ ಸಭಲರನ್ನಾಗಿ ಮಾಡುತ್ತಾ ಸಂಘವು ಬೆಳೆದು ಬಂದ ಹಾದಿಯನ್ನು ವಿವರಿಸಿ, ಇನ್ನೂ ಹೆಚ್ಚು ಶ್ರಮಿಸಲು ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ವಿನಂತಿಸಿ , ಸೇವಾ ಸಹಕಾರ ಬ್ಯಾಂಕಿನ ಚುನಾವಣಾ ಪ್ರಚಾರ ಮಾಡಿ ಮತಯಾಚಿಸಿದರು.