ಡಾ. ಎಚ್. ಪುಷ್ಪಲತಾ ರವರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರಾಗಿ, ಸಮಾಜ ಸೇವಕರಾಗಿ ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರವಾಸ ಮಾಡಿ ರೈತರ ಸಂಕಷ್ಟಗಳನ್ನು ಆಲಿಸಿ ಅವರ ಕೈ ಹಿಡಿದು ನೆರವಾಗಿದ್ದಾರೆ. ಸರ್ಕಾರದಿಂದ ರೈತರಿಗೆ ಸೂಕ್ತ ಸೌಲಭ್ಯಗಳು ಮತ್ತು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗಲೇಬೇಕು ಎಂದು ಹೋರಾಟ, ಧರಣಿ ಮಾಡಿರುವ ಇವರು ಗೌಡತಿಯರ ಸೇನೆಯ ಕಾರ್ಯಧ್ಯಕ್ಷೆಯಾಗಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರಗಳ ವಿರುದ್ಧ ಕಠಿಣ ಹೋರಾಟ ಮಾಡಿದ್ದಾರೆ. ನೊಂದವರ, ಬಡವರ ಪರ ನಿಂತು ಆರ್ಥಿಕ ಸಹಾಯ ಮಾಡಿ ಮಾನವೀಯತೆ ಮೆರೆದಿರುವ ಮಹಾನ್ ಸಾಧಕಿ ಡಾ. ಹೆಚ್. ಪುಷ್ಪಲತಾ ಅವರಿಗೆ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆ ಸಿಂಗಾಪುರದಲ್ಲಿ ಆಯೋಜಿಸಿದ್ದ ವಿಶ್ವ ಕನ್ನಡ ಹಬ್ಬದಲ್ಲಿ ವಿಶ್ವಮಾನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶಿವಕುಮಾರ್ ನಾಗರ ನವಿಲೆ, ಬಾಹ್ಯಾಕಾಶ ವಿಜ್ಞಾನಿಗಳಾದ ಡಾ. ಎ. ಎಸ್. ಕಿರಣ್ ಕುಮಾರ್, ಸಾಯಿ ಗೋಲ್ಡ್ ಪ್ಯಾಲೇಸ್ ಶರವಣ, ಆನಂದ ಗುರೂಜಿ, ಡಾ. ಸಿ. ಸೋಮಶೇಖರ್, ಕನ್ನಡ ಸಂಘ ಸಿಂಗಪುರ ಅಧ್ಯಕ್ಷ ವೆಂಕಟ್, ದಿನೇಶ್ ಜೋಶಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.