ಚೆನ್ನೈ: ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಂಗಾಪುರದಿಂದ ಬಂದಿಳಿದ 25 ಪ್ರಯಾಣಿಕರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಮತ್ತು ಚೆನ್ನೈ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ರೂ. 15 ಕೋಟಿ ಮೌಲ್ಯದ 19.5 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಗುಪ್ತಚರ ಮಾಹಿತಿ ಆಧಾರಿಸಿ ಈ ಕಾರ್ಯಾಚರಣೆ ನಡೆಸಲಾಯಿತು. ಸ್ಕೂಟ್ ಏರ್ಲೈನ್ಸ್ (TR 578) ಏರ್ ಇಂಡಿಯಾ (IX 687) ಮತ್ತು ಇಂಡಿಗೋ (6E-1004) ವಿಮಾನಗಳಲ್ಲಿ ಬಂದಿಳಿದ ಎಲ್ಲಾ ಪ್ರಯಾಣಿಕರು ಒಂದೇ ಗ್ಯಾಂಗ್ಗೆ ಸೇರಿದವರು ಎನ್ನಲಾಗಿದ್ದು, ಎಲ್ಲಾ 25 ಪ್ರಯಾಣಿಕರನ್ನು ಬಂಧಿಸಲಾಗಿದೆ.