ಕೆ ಆರ್ ಪೇಟೆ: ತಾಲ್ಲೋಕಿನ ಸಂತೇಬಾಚಹಳ್ಳಿ ಹೋಬಳಿಯ ನಾಯಕನಹಳ್ಳಿ ಗ್ರಾಮದ ಮೊಮ್ಮಗ ಸಾಗರ್ ನಟಿಸಿರುವ ಸಿಂಹರೂಪಿಣಿ ಚಿತ್ರ ಅಕ್ಟೋಬರ್ 17 ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು ಸಿಂಹರೂಪಿಣಿ ಚಿತ್ರವನ್ನು ತಾವುಗಳು ಚಿತ್ರಮಂದಿರಗಳಲ್ಲಿ ಬಂದು ವೀಕ್ಸೀಸುವ ಮೂಲಕ ಆಶೀರ್ವದಿಸಬೇಕೆಂದು ನಾಯಕನಟ ಸಾಗರ್ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು ಸಿಂಹರೂಪಿಣಿ ಚಲನಚಿತ್ರ ಬಹುಮುಖ್ಯವಾಗಿ ಸುಂದರ ದಾರ್ಮಿಕವಾಗಿ ಮೂಡಿ ಬಂದ ಚಲನಚಿತ್ರವಾಗಿದ್ದು ನುರಿತ ಕಲಾವಿದರು ನಟಿಸಿದ್ದಾರೆ ಎಂದರು.ಕಥೆ ಮತ್ತು ನಿರ್ಮಾಪಕರಾಗಿ ಕೆಎಂ ನಂಜುಂಡ ಈಶ್ವರ ರವರದ್ದಾಗಿದ್ದು ಚಿತ್ರಕಥೆ ಹಾಡುಗಳು ಸಂಭಾಷಣೆ ನಿರ್ದೇಶನವನ್ನು ಕಿನ್ನಳರಾಜ್ ರವರದ್ದಾಗಿದೆ ಇಂತಹ ನೂತನ ಕಲಾವಿದರನ್ನು ಬೆಳೆಸಿ ಹರಸಿ ತಾಲ್ಲೋಕಿನ ಕಲಾವಿದರಿಗೆ ಆಶೀರ್ವದಿಸಬೇಕೆಂದು ಹಿರಿಯ ಮುಂಖಂಡರಾದ ಮಾಳಗೂರು ಜಗದೀಶ್ ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಎಸ್ಎಸ್ಎನ್ ಸಹಾಕಾರ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕರಾದ ರಾಜು,ಮೋಹನ್,ನವೀನ್,ಯೋಗಣ್ಣ,ಮಹದೇವ್ ಅರೆಬೊಪ್ಪನಹಳ್ಳಿ ಹರೀಶ್, ದೇವರಾಜು ಹವ್ಯಾಸಿ ಸಂಶೋಧಕರಾದ ಶಿಕ್ಷಕರಾದ ಸಂತೇಬಾಚಹಳ್ಳಿ ರಂಗಸ್ವಾಮಿ ಸೇರಿದಂತೆ ಹಲವಾರು ಅಭಿಮಾನಿಗಳು ಭಾಗವಹಿಸಿದ್ದರು.