ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುರ್ಚಿಯಿಂದ ಕೆಳಗಿಳಿಸಲು ಅವರ ವಿರುದ್ಧ ಪಿತೂರಿ ನಡೆದಿದೆ ಎಂಬ ಶಂಕೆಯನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಾಗಮಂಗಲದಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಘಟನಾ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಗೆ ಮಾತನಾಡಿದ ಅವರು, ನಾಗಮಂಗಲ ಗಲಭೆಗೂ ಸಿಎಂ ಕುರ್ಚಿಗೂ ಸಂಬಂಧ ಇದ್ಯಾ. ಸಿದ್ದರಾಮಯ್ಯ ಕೆಳಗೆ ಇಳಿಸಲು ನಡೆದಿದ್ಯಾ ಪೂರ್ವಯೋಜಿತ ಸಂಚು ರೂಪಿಸಲಾಗಿದೆಯಾ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯಗೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ನಾಯಕರು ನಡೆಸಿದ ಕೃತ್ಯನಾ ಇದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್ ಕಾಲದ ಘಟನೆಗೂ ನಾಗಮಂಗಲ ಗಲೆಭೆಗೂ ಸಾಮ್ಯತೆ ಇರಬಹುದೇ ಎಂದಿದ್ದಾರೆ.ವೀರೇಂದ್ರ ಪಾಟೀಲ್ ಸಿಎಂನಿಂದ ಕೆಳಗೆ ಇಳಿಲು ಅಂದು ಗಲಭೆ ನಡೆಸಲಾಗಿತ್ತು. ರಾಮನಗರ, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ನಾಯಕರೇ ಬೆಂಕಿ ಹಚ್ಚಿಸಿ ಗಲಭೆ ಮಾಡಿಸಿದ್ದರು. ಈಗಲೂ ನಾಗಮಂಗಲದಲ್ಲಿ ಗಲಭೆ ಮಾಡಿಸಲಾಗಿದೆ. ಕಾಂಗ್ರೆಸ್ನ ನಾಯಕರೇ ಈ ಘಟನೆ ಮಾಡಿಸಿದ್ದಾರೆ.
ಸಿದ್ದರಾಮಯ್ಯನನ್ನು ಸಿಎಂನಿಂದ ಕೆಳಗಿಳಿಸಲು ಈ ಕೃತ್ಯ ನಡೆಸಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ ಅವರು, ಈ ಬಗ್ಗೆ ತನಿಖೆ ಮಾಡಿಸಲಿ ಎಂದು ಆಗ್ರಹ ಪಡಿಸಿದ್ದಾರೆ.ಇದೀಗ ಚನ್ನಪಟ್ಟಣದ ವಿಧಾನಸಭಾ ಉಪಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಒಂದು ವರ್ಗದವರ ಓಲೈಕೆ ಮಾಡಲು ಈ ಘಟನೆ ನಡೆದಿದೆ ಎಂದು ಸಹ ಅವರು ಹೇಳಿದ್ದಾರೆ. ಗೃಹ ಸಚಿವ ಪರಮೇಶ್ವರ್ ಇದೊಂದು ಸಣ್ಣ ಗಲಾಟೆ ಅಂತಾರೆ. ದಾಖಲಾಗಿರುವ ಎಫ್ಐಆರ್ ನೋಡಿದ್ರೆ ಪರಮೇಶ್ವರ್ನನ್ನಾ ಗೃಹ ಸಚಿವ ಅನ್ನೋಕೆ ಆಗುತ್ತೆಯೇ ಎಂದು ಪ್ರಶ್ನಿಸಿದ್ದಾರೆ.
ಸ್ಥಳೀಯ ಪೊಲೀಸರ ವೈಫಲ್ಯ ಇಲ್ಲಿ ಎದ್ದು ಕಾಣ್ತಾ ಇದೆ. ಪ್ರತಿಯೊಂದು ರಾಜಕೀಯ ಎಂದು ಕಾಂಗ್ರೆಸ್ ಹೇಳೋದು ಸರಿಯಲ್ಲ. ಅಮಾಯಕ ಜನರ ಬದುಕು ಬೀದಿಗೆ ಬಂದಿದೆ. 19 ವರ್ಷದ ಸಣ್ಣ ವ್ಯಕ್ತಿಯ ಜೀವನ ಬೀದಿಗೆ ಬಂದಿದೆ. ಗಲಭೆಯಲ್ಲಿ ಪೊಲೀಸರನ್ನು ಕೊಲೆ ಮಾಡಲು ಬಂದಿದ್ದಾರೆ ಎಂದು ಎಫ್ಐಆರ್ನಲ್ಲಿ ಬರೆದಿದ್ದಾರೆ. ಪೊಲೀಸರಿಗೆ ಭದ್ರತೆ ನೀಡದ ದರಿದ್ರ ಸರ್ಕಾರ ಇದೆ. ನಾನು ಎರಡು ಕೋಮುಗಳ ಬಗ್ಗೆ ಮಾತಾಡಲ್ಲ.
ಇದರ ಮಧ್ಯ ಕಂದಕ ತೋಡುವುದನ್ನು ಬಿಡಬೇಕು. ಎಸ್ಐಟಿ ತನಿಖೆ ಸರಿಯಲ್ಲ. ಇದು ಸಿದ್ದರಾಮಯ್ಯ, ಶಿವಕುಮಾರ್ ಇನ್ವೇಸ್ಟಿಗೇಷನ್ ಟೀಮ್ ಎಂದು ಹೇಳಿದ್ದು ನಾನು. ಅದೇ ರೀತಿಯಾಗಿಯೇ ನಡೆದುಕೊಳ್ಳುತ್ತಿದ್ದಾರೆ. ತಲ್ವಾರ್ ಇಟ್ಟುಕೊಂಡು ಓಡಾಡುತ್ತಾರೆ ಎಂದರೆ ಎಷ್ಟು ಧೈರ್ಯ ಇರಬೇಕು. ಪೆಟ್ರೋಲ್ ಬಾಂಬ್ ಎಸೆಯುತ್ತಾರೆ ಎಂದರೆ ಹೇಗೆ ಆಕ್ರೋಶ ಹೊರ ಹಾಕಿದ್ದಾರೆ.