ತುಮಕೂರು: ಅಂತರರಾಷ್ಟ್ರೀಯ ದರ್ಜೆಯ ಚಿಕಿತ್ಸಾಸೌಲಭ್ಯ ಹೊಂದಿರುವ ನಗರದ ಶಿರಾ ರಸ್ತೆಯಲ್ಲಿರುವ ಗಂಗಾ ಆಸ್ಪತ್ರೆಯನ್ನು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಮುಖ್ಯಮಂತ್ರಿಗಳು, ಹೆಸರಾಂತ ತಜ್ಞವೈದ್ಯರಾದ ಡಾ.ವಿಜಯ್ ತುಪಾಕಿ ಅವರು ಅತ್ಯಾಧುನಿಕ ಸೌಲಭ್ಯದ ಗಂಗಾ ಆಸ್ಪತ್ರೆ ಆರಂಭಿಸಿದ್ದಾರೆ. ಈ ಆಸ್ಪತ್ರೆ ಹೆಚ್ಚು ಜನರ ಚಿಕಿತ್ಸೆಗೆ ಅನುಕೂಲವಾಗಲಿ ಎಂದು ಆಶಿಸಿದರು.
ಬೆನ್ನು ಮೂಳೆ, ಬೆನ್ನು ನರ ಮತ್ತು ಎಲುಬು ಕೀಲು ತಜ್ಞರಾಗಿರುವ ಡಾ.ವಿಜಯ್ ತುಪಾಕಿ ಅವರುಪೈನಲ್ ಕಾರ್ಡ್ ಚಿಕಿತ್ಸೆಯಲ್ಲಿ ಪರಿಣಿತರು. ಆರೋಗ್ಯ
ಸಮಸ್ಯೆ ಇರುವವರಿಗೆ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸಾ ಸೇವೆ ದೊರೆಯಲಿ ಎಂದು ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ಕೋರಿದರು.
ಬೆನ್ನು ಮೂಳೆ, ಬೆನ್ನು ನರ, ಕೀಲು ಸಮಸ್ಯೆಯ ಕ್ಲಿಷ್ಟಕರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಪರಿಣತರಾಗಿ ಡಾ.ವಿಜಯ್ ತುಪಾಕಿಯವರು 20ಕ್ಕೂ ಹೆಚ್ಚು ದೇಶಗಳ ರೋಗಿಗಳಿಗೆ ಚಿಕಿತ್ಸೆ ನೀಡಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಹೆಸರಾಗಿದ್ದಾರೆ.
ತುಮಕೂರಿನ ಕೆಲವೇ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಗಳಲ್ಲಿ ಗಂಗಾ ಆಸ್ಪತ್ರೆ ಮುಂಚೂಣಿಯಲ್ಲಿದ್ದು 55 ವೈದ್ಯಕೀಯ ಸಮಾಲೋಚಕರು, 12 ಐಸಿಯು ಬೆಡ್ಗಳು, 4 ಆಪರೇಷನ್ ಥಿಯೇಟರ್, ವಿವಿಧ ದರ್ಜೆಯ ವಾರ್ಡ್ಗಳು, ಪರಿಣಿತ ಸಿಬ್ಬಂದಿ, ಪ್ರಯೋಗಾಲಯ, ಆಧುನಿಕ ಚಿಕಿತ್ಸಾ ಯಂತ್ರೋಪಕರಣ ಮತ್ತಿತರ ಅಗತ್ಯ ಎಲ್ಲಾ ಸೌಕರ್ಯಗಳು ಈ ಆಸ್ಪತ್ರೆಯಲ್ಲಿವೆ.
ಮುಖ್ಯಮಂತ್ರಿಗಳ ಜೊತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವ ಭೈರತಿ ಸುರೇಶ್, ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ, ಕೂಡ್ಲಿಗಿ ಶಾಸಕ ಡಾ.ಶ್ರೀನಿವಾಸ್, ಮುಖ್ಯಮಂತ್ರಿಗಳ ಮಾಧ್ಯಮಸಲಸಹೆಗಾರ ಪ್ರಭಾಕರ್, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಪಂ ಸಿಇಓ ಜಿ.ಪ್ರಭು, ಎಸ್ಪಿ ಕೆ.ವಿ. ಅಶೋಕ್, ನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ,ಹಿರಿಯ ಐಎಎಸ್ ಅಧಿಕಾರಿ ಅಶೋಕ್ ದಳವಾಯಿ,ಹಡಗಿನಾಳ ಮಠದ ಮುತ್ತೇಶ್ವರ ಸ್ವಾಮೀಜಿ, ಪ್ರಜಾಪಗ್ರತಿ ಸಂಪಾದಕರಾದ ಎಸ್.ನಾಗಣ್ಣ, ಹಾಲಸಿದ್ದೇಶ್ವರ ದೇವಸ್ಥಾನ ಅರ್ಚಕರಾದ ಭರಮಪ್ಪ ಪೂಜಾರ್, ನಾಗಪ್ಪ ಸನದಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಸೇರಿದಂತೆ ವಿವಿಧ ಆಸ್ಪತ್ರೆಗಳ ತಜ್ಞ ವೈದ್ಯರು, ಅಧಿಕಾರಿಗಳು, ಸಂಘಸಂಸ್ಥೆಗಳು ಮುಖಂಡರು ಆಗಮಿಸಿ ಶುಭ ಕೋರಿದರು.