ಕೋಲ್ಕತ್ತಾ: ಸಿಕಂದರಾಬಾದ್-ಶಾಲಿಮಾರ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ನ ಮೂರು ಬೋಗಿಗಳು ಪಶ್ಚಿಮ ಬಂಗಾಳದ ಹೌರಾ ಬಳಿ ಇಂದು ಶನಿವಾರ ನಸುಕಿನ ಜಾವ 5 ಗಂಟೆ ಸುಮಾರಿಗೆ ಹಳಿತಪ್ಪಿತು ಎಂದು ಆಗ್ನೇಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಸಾಪ್ತಾಹಿಕ ವಿಶೇಷ ರೈಲು ಕೋಲ್ಕತ್ತಾದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ನಲ್ಪುರದಲ್ಲಿ ಹಳಿತಪ್ಪಿದೆ. ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ವರದಿಯಾಗಿಲ್ಲ ಎಂದು ಹೇಳಿದ್ದಾರೆ. ಹಳಿತಪ್ಪಿದ ಬೋಗಿಗಳಲ್ಲಿ ಪಾರ್ಸೆಲ್ ವ್ಯಾನ್ ಕೂಡ ಸೇರಿದೆ.
22850 ಸಿಕಂದರಾಬಾದ್ ಶಾಲಿಮಾರ್ ವೀಕ್ಲಿ ಎಕ್ಸ್ಪ್ರೆಸ್ ಖರಗ್ಪುರ ವಿಭಾಗದ ನಲ್ಪುರ್ ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದಾಗ ಬೋಗಿಗಳು ಹಳಿತಪ್ಪಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತ ಪರಿಹಾರ ರೈಲು ಮತ್ತು ಸಂತ್ರಗಚಿ ಮತ್ತು ಖರಗ್ಪುರದಿಂದ ವೈದ್ಯಕೀಯ ನೆರವು ರೈಲುಗಳನ್ನು ಸಹಾಯಕ್ಕಾಗಿ ತಕ್ಷಣವೇ ಕಳುಹಿಸಲಾಯಿತು.
ಕೋಲ್ಕತ್ತಾ ಕಳುಹಿಸಲು ಪ್ರಯಾಣಿಕರನ್ನು ಸಾಗಿಸಲು ಬಸ್ಗಳನ್ನು ಸಹ ಕಳುಹಿಸಲಾಯಿತು.