ಬೆಂಗಳೂರು: ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಪನಾ ಚಾವ್ಲಾ ರಸ್ತೆಯಲ್ಲಿರುವ ಬೇಕರಿ ಒಂದರಲ್ಲಿ ಸಿಗರೇಟ್ ತೆಗೆದುಕೊಂಡು ಅಂಗಡಿ ಮಾಲಕ ಸಿಗರೇಟ್ ಹಣ ಕೇಳಿದಾಗ ಹಣ ನೀಡದೆ ಬೆದರಿಕೆ ಹಾಕಿ ಪರಾರಿಯಾಗಿದ್ದ ಇಬ್ಬರನ್ನು ಸಂಜಯ್ ನಗರ ಪೊಲೀಸರು ಬಂಧಿಸಿರುತ್ತಾರೆ.
ಮೊನ್ನೆ ರಾತ್ರಿ ಈ ಘಟನೆ ಸಂಭವಿಸಿದ್ದು ಅಂಗಡಿಯನ್ನು ನಡೆಸುತ್ತಿರುವ ವಿಧವೆ ವಿಧವೆಯೊಬ್ಬರು ಮತ್ತು ಅವರ ಸಂಬಂಧಿಕ ಅಂಗಡಿಯಲ್ಲಿ ಕುಳಿತಿದ್ದ ಹುಡುಗನಿಗೂ ಸಹ ಬೆದರಿಕೆ ಹಾಕಿ ಪರಾರಿಯಾಗಿದ್ದರು.
ಈ ಸಂಬಂಧ ಸಂಜಯನಗರ ಪೊಲೀಸರು ಗುರು 28 ವರ್ಷ ವೋಲ್ವೋ ಕಂಪನಿಯಲ್ಲಿ ಕೆಲಸ ಬೆನಗಾನಹಳ್ಳಿ ವಾಸ ಮತ್ತು ವಿಶ್ವಾಸ್ 24 ವರ್ಷ ಆಟೋ ಚಾಲಕ ಭೂಪಸಂದ್ರ ಇವರುಗಳನ್ನು ಬಂಧಿಸಿರುತ್ತಾರೆ.ಇವರುಗಳ ವಿರುದ್ಧ ದರೋಡೆ ಮತ್ತು ರಾಬರಿ ಪ್ರಕರಣಗಳನ್ನು ದಾಖಲು ಮಾಡಿಕೊಂಡಿರುತ್ತಾರೆ.