ಬೆಳಗಾವಿ: ಪೊಲೀಸರಿಂದ ಬಂಧನಕ್ಕೊಳಗಾಗಿರುವ ವಿಧಾನ ಪರಿಷತ್ ಸದಸ್ಯಸಿಟಿ ರವಿ ಅವರಿಗೆ ಜಾಮೀನು ಸಿಗುವ ಸಾಧ್ಯತೆ ಇದೆಯೆಂದು ಅವರ ವಕೀಲ ಶ್ರೀನಿವಾಸ ರಾವ್ ಹೇಳಿದರು. ಜಾಮೀನು ಕೋರಿ ವಾದ ಮಂಡಿಸಿದ ಬಳಿಕ ಕೋರ್ಟ್ ಹೊರಗಡೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಜೆಎಂಎಫ್ಸಿ ಗೆ ಜಾಮೀನು ನೀಡುವ ಅಧಿಕಾರವಿಲ್ಲ ಎಂಬ ವಿಷಯ ಪ್ರಸ್ತಾಪವಾದಾಗ ವ್ಯಕ್ತಿಯೊಬ್ಬನ ಸ್ವಾತಂತ್ರ್ಯವು ಅತ್ಯಂತ ಪ್ರಾಮುಖ್ಯವಾದದ್ದು ಎಂದು ಮಾನ್ಯ ಸುಪ್ರೀಂ ಕೋರ್ಟ್ ಹೇಳಿರುವುದರಿಂದ ಈ ಕೋರ್ಟ್ ಅದನ್ನು ಪರಿಗಣಿಸಿ ಜಾಮೀನು ನೀಡಬಹುದೆಂಬ ಸಂಗತಿಯನ್ನು ಜೆಎಂಎಫ್ಸಿಗೆ ಮನವರಿಕೆ ಮಾಡಿಸಲಾಗಿದೆ ಎಂದು ಹೇಳಿದರು.