ಬೆಂಗಳೂರು: ನಗರದಲ್ಲಿಂದು ಮಾತಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬೆಳಗಾವಿಯ ಪೊಲೀಸ್ ಕಮೀಶನರ್, ಸಿಟಿ ರವಿ ಪ್ರಕರಣದಲ್ಲಿ ಬಹಳ ಕೆಟ್ಟದ್ದಾಗಿ ನಡೆದುಕೊಂಡಿದ್ದಾರೆ, ಅವರು ಬೆಳಗಾವಿಗೆ ಮಾತ್ರ ಕಮೀಶನರ್, ಆದರೆ ತಮ್ಮ ವ್ಯಾಪ್ತಿಗೆ ಒಳಪಡದ ಖಾನಾಪುರದಲ್ಲಿ ಯಾರೊಂದಿಗೋ ನಿರಂತರವಾಗಿ ಫೋನಲ್ಲಿ ಮಾತಾಡಿದ ವಿಡಿಯೋಗಳನ್ನು ಜನ ನೋಡಿದ್ದಾರೆ. ಅವರು ಡಿಕೆ ಶಿವಕುಮಾರ್ ಜೊತೆ ಮಾತಾಡುತ್ತಿದ್ದರೋ ಅಥವಾ ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಯೋ ಅನ್ನೋದನ್ನು ಕಾಲ್ ರೆಕಾರ್ಡ್ಸ್ ಮೂಲಕ ಪತ್ತೆ ಮಾಡಬೇಕು ಎಂದು ಆಗ್ರಹಿಸಿದರು. ರವಿ ಮೇಲೆ ಹಲ್ಲೆ ನಡೆಸಲು ವ್ಯವಸ್ಥಿತ ಸಂಚು ನಡೆದಿತ್ತು ಎಂದು ಹೇಳಿದ ಅವರು, ಪಂಚಮಸಾಲಿ ಮೀಸಲಾತಿಗಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೂ ಬೆಳಗಾವಿ ಪೊಲೀಸ್ ಅಧಿಕಾರಿಗಳು ಲಾಠಿಚಾರ್ಜ್ ನಡೆಸಿದ್ದಾರೆ, ಇವರೆಲ್ಲ ಐಪಿಎಸ್ ಅಧಿಕಾರಿಗಳೆನಿಸಿಕೊಳ್ಳಲು ಅನರ್ಹರು ಎಂದರು.